ಬೆಂಗಳೂರು : ವಿವಿಧ ಸ್ಥರದ ಖಾಸಗೀ ವಲಯದ ಕಾರ್ಮಿಕರ ನಿವೃತ್ತಿಯ ವಯಸ್ಸನ್ನು ಏರಿಕೆ ಮಾಡುವುದರ ಮೂಲಕ ಇದೀಗ ಕಾರ್ಮಿಕರಿಗೆ ಕಾರ್ಮಿಕ ಇಲಾಖೆ ಸಿಹಿ ಸುದ್ದಿಯನ್ನು ನೀಡಿದೆ.
ಖಾಸಗೀ ವಲಯದಲ್ಲೂ ದುಡಿಯುತ್ತಿರುವವ ನಿವೃತ್ತಿಯ ವಯಸ್ಸನ್ನು 58 ವರ್ಷದಿಂದ 60 ವರ್ಷಕ್ಕೆ ಏರಿಕೆ ಮಾಡಲಾಗಿದ್ದು, ಈ ಕುರಿತು ಕಾರ್ಮಿಕ ಇಲಾಖೆ ಆದೇಶ ಹೊರಡಿಸಿದೆ.
ಈ ಆದೇಶದಲ್ಲಿ ಕರ್ನಾಟಕ ಸರ್ಕಾರವು 1946ರ ಔದ್ಯೋಗಿಕ ಉದ್ಯೋಗಗಳ (ಸ್ಥಾಯಿ ಆದೇಶಗಳ) ಕಾಯ್ದೆಯಡಿ ರೂಪಿಸಲಾದ 1961ರ ಕರ್ನಾಟಕ ಔದ್ಯೋಗಿಕ ಉದ್ಯೋಗಗಳ (ಸ್ಥಾಯಿ ಆದೇಶಗಳು) ನಿಯಮಾವಳಿಯ ನಿಯಮ 3(1)ರಡಿ ನಿಗಧಿ ಪಡಿಸಲಾದ ಮಾದರಿ ಸ್ಥಾಯಿ ಆದೇಶಗ ಎ ಮತ್ತು ಬಿ ಗಳಲ್ಲಿ ಕ್ರಮವಾಗಿ ಕಂಡಿಕೆ 15-ಎ ಮತ್ತು 22-ಎ ಗಳಲ್ಲಿರುವ ಕಾರ್ಮಿಕ ನಿವೃತ್ತಿ ವಯಸ್ಸನ್ನು 58 ವರ್ಷಗಳಿಂದ 60 ವರ್ಷಗಳಿಗೆ ಹೆಚ್ಚಿಸಿ ಅಧಿಸೂಚನೆ ಹೊರಡಿಸಲಾಗಿದೆ ಎಂದು ತಿಳಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.