ಆ ಗ್ರಾಮದಲ್ಲಿ 800 ವರ್ಷಗಳ ಹಿಂದಿನ ಇತಿಹಾಸ ಪ್ರಸಿದ್ದ ಚೋಳರು ಕಟ್ಟಿದ ದೇವಾಲಯವಿದೆ.ಇನ್ನೂ ದೇವಾಲಯವನ್ನ ಅಭಿವೃದ್ಧಿ ಮಾಡಲಾಗಿದ್ದು, ಕಳೆದ ಐದು ವರ್ಷಗಳಿಂದ ಭಕ್ತರ ಕಾಣಿಕೆ ಹುಂಡಿಯನ್ನ ಓಪನ್ ಮಾಡಿರಲಿಲ್ಲ. ಇದನ್ನೆ ಹೊಂಚಿ ಹಾಕಿದ್ದ ಖದೀಮರು ದೇವಾಲಯಕ್ಕೆ ಕನ್ನ ಹಾಕಿದ್ದಾರೆ..ಜತೆಗೆ ಸಿಸಿಟಿವಿ ಡಿವಿಆರ್ ನ್ನ ಕೂಡ ಹೊತ್ತೊಯ್ದಿದ್ದಾರೆ.ದೇವಾಯದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರೋ ಭಕ್ತರ ಕಾಣಿಕೆ ಚಿಲ್ಲರೆ ಹಣ..... ಹುಂಡಿಯನ್ನ ಕೊರೆದು ಹಣವನ್ನ ದೋಚಿರೋ ಖದೀಮರು..... ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನ ಮುಗಬಾಳ ಗ್ರಾಮದಲ್ಲಿ. ಅಂದಹಾಗೆ ಗ್ರಾಮದಲ್ಲಿ 800 ವರ್ಷಗಳ ಹಿಂದೆ ಚೋಳರು ವೀರಭದ್ರಸ್ವಾಮಿ ದೇವಾಲಯವನ್ನ ನಿರ್ಮಿಸಿದ್ದಾರೆ... ಇನ್ನೂ ಈ ಇತಿಹಾಸ ಪ್ರಸಿದ್ದ ದೇವಾಲಯಕ್ಕೆ ನಾನಾ ಮೂಲೆಗಳಿಂದ ಭಕ್ತರು ಬರ್ತಾರೆ....ಬರೋ ಭಕ್ತರು ದೇವರ ಹುಂಡಿಗೆ ಕಾಣಿಕೆಯನ್ನು ಸಮರ್ಪಿಸುತ್ತಾರೆ... ಹೀಗೆ ಸಂಗ್ರಹವಾಗಿದ್ದ ಹುಂಡಿಯ ಮೇಲೆ ಕಳ್ಳರ ಕಣ್ಣು ಬಿದ್ದಿದ್ದು ಕಳೆದ ರಾತ್ರಿ ದೇವಾಲಯಕ್ಕೆ ಖದೀಮರು ಕನ್ನ ಹಾಕಿದ್ದಾರೆ... ದೇವಾಲಯದ ಕಿಟಕಿಯನ್ನ ಮುರಿದಿರುವ ಖದೀಮರು ಒಳಗೆ ನುಗ್ಗಿದ್ದಾರೆ.. ಇನ್ನೂ ದೇವಾಲಯದಲ್ಲಿ ಅಳವಡಿಸಿದ್ದ ಸಿಸಿಟಿವಿಯನ್ನ ದ್ವಂಸ ಗೊಳಿಸಿ ಹುಂಡಿಯನ್ನ ಕೊರೆದು ಅದರಲ್ಲಿದ್ದ ಲಕ್ಷಾಂತರ ರೂಪಾಯಿ ಹಣವನ್ನ ಖದೀಮರು ದೋಚಿದ್ದಾರೆ.
ಅಂದಹಾಗೆ ಚೋಳರ ಕಾಲದ ಇತಿಹಾಸ ಪ್ರಸಿದ್ದ ವೀರಭದ್ರ ಸ್ವಾಮಿ ದೇವಾಲಯವನ್ನ ಕಳೆದ ಐದು ವರ್ಷಗಳ ಹಿಂದೆ ಗ್ರಾಮಸ್ಥರು ಸೇರಿದಂತೆ ಭಕ್ತಾಧಿಗಳು ಜೀರ್ಣೋದ್ಧಾರ ಮಾಡಿ ಕುಂಭಾಭಿಷೇಕ ಮಾಡಿದ್ದಾರೆ... ಅಂದು ಇಟ್ಟಿದ್ದ ಹುಂಡಿಯನ್ನ ಇದುವರೆಗೂ ಮುಜುರಾಯಿ ಇಲಾಖೆ ಒಪನ್ ಕೂಡ ಮಾಡಿರಲಿಲ್ಲ. ಹೀಗಾಗಿ ದೇವರ ಹುಂಡಿ ಯಲ್ಲಿ ಲಕ್ಷಾಂತರ ಹಣವಿತ್ತಂತೆ.. ಈ ಬಗ್ಗೆ ಮಾಹಿತಿ ತಿಳಿದೇ ಕಳ್ಖರು ಹುಂಡಿಗೆ ಕನ್ನ ಹಾಕಿದ್ದಾರೆ. ಅದರಲ್ಲೂ ಹುಂಡಿಯಲ್ಲಿ ನೋಟುಗಳನ್ನ ದೋಚಿರೋ ಕಳ್ಳರು ಚಿಲ್ಲರೆ ಹಣವನ್ನ ಚೆಲ್ಲಾಡಿದ್ದಾರೆ..ಅಲ್ಲದೆ ಯಾರಿಗೂ ಕಳ್ಳತನ ಮಾಹಿತಿ ಗೊತ್ತಾಗದಂತೆ ಸಿಸಿಟಿವಿ ಡಿವಿಆರ್ ಕೂಡ ಹೊತ್ತೊಯ್ದಿದ್ದಾರೆ.. ಬೆಳಗ್ಗೆ ದೇವರ ಬಾಗಿಲು ಒಪನ್ ಮಾಡಿ ಪೂಜೆ ಮಾಡಲು ಬಂದಾಗ ಅಲ್ಲಿನ ಅರ್ಚಕರಿಗೆ ಕಳ್ಳತನವಾಗಿರೋದು ಕಂಡು ಬಂದಿದೆ.
ಈ ಸಂಬಂಧ ಸ್ಥಳಕ್ಕೆ ನಂದಗುಡಿ ಪೊಲೀಸರು ಹಾಗೂ ಬೆರಳಚ್ಚು ತಜ್ನರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ತನಿಖೆ ಕೈಗೊಂಡಿದ್ದಾರೆ.. ಇನ್ನೂ ಐದು ವರ್ಷಗಳಿಂದ ಹುಂಡಿಯನ್ನ ತೆರೆಯದೆ ಮುಜರಾಯಿ ಇಲಾಖೆ ನಿರ್ಲಕ್ಷದಿಂದ ಭಕ್ತರ ಹುಂಡಿ ಕಾಣಿಕೆ ಹಣ ಕಳ್ಳರ ಪಾಲಾಗಿದೆ.