ರಾಜ್ಯ ರಾಜಕೀಯದಲ್ಲಿ ಸದ್ಯ ವರ್ಗಾವಣೆ ದಂದೆ ವಿಚಾರವಾಗಿ ದಿನೇ ದಿನೇ ಹೊಸ ತಿರುವನ್ನ ಪಡೆಯುತ್ತಿದೆ. ಒಂದು ಕಡೆ ಕೃಷಿ ಇಲಾಖೆಯಲ್ಲಿ ರೇಟ್ ಕಾರ್ಡ್ ನ್ನ ಬಿಡುಗಡೆ ಮಾಡಿ ಸರ್ಕಾರಕ್ಕೆ ಶಾಕ್ ನೀಡಿದ್ರು ಹೆಚ್ ಡಿಕೆ... ಈ ವಿಚಾರವಾಗಿ ಮತನಾಡಿದ ಹೆಚ್ ಡಿಕೆ, ನಾನೇನು ಮಾಡಿಲ್ಲ, ಇಲಾಖೆಯಲ್ಲಿ ನಡೆದಿರಬಹುದು ಅಂತ ಹೇಳಿದ್ದಾರೆ. ನಾನು ಸರ್ಕಾರದ ವಿರುದ್ದ ವರ್ಗಾವಣೆ ದಂದೆಯ ಬಗ್ಗೆ XL ಶೀಟ್‌ನಲ್ಲಿ ಬಿಟ್ಟಿದ್ದೆ. ನನ್ನ ಕಾಲದ್ದನ್ನ ಅವರು ತೋರಿಸ್ತಿದ್ರು.ನನಗೆ ಶಾಕ್ ಆಯ್ತು.ನನ್ನ ಗಮನಕ್ಕೆ ಬಾರದೆ ಯಾವಾಗ ರೇಟ್ ಫಿಕ್ಸ್ ಆಯ್ತು ಅಂತ.ಮುಖ್ಯ ಇಂಜಿನಿಯರ್ ಹುದ್ದೆಗೆ 30 ಕೋಟಿ ಕಪ್ಪಾ.ಇದರ ಒಳಗೆ ನನ್ನ ಕಾಲದಲ್ಲಿ ನಡೆದಿದ್ದು ಏನೂ ಇಲ್ಲ.2008 ರಿಂದ 2013 ಮಾಗಡಿ ವಿಧಾನಸಭೆಯಲ್ಲಿ ನಡೆದ ರಸ್ತೆ ಕಾಮಗಾರಿ.ಇದೆ ವಿಚಾರವಾಗಿ ಸಿದ್ದರಾಮಯ್ಯ ,ಹಾಗೂ ಮಹದೇವಪ್ಪ ಅವರ ಕಾಲದ್ದು. ಇನ್ನೂ ವರ್ಗಾವಣೆ ವಿಚಾರವಾಗಿ ೫೦೦ ಕೋಟಿ ದಂದೆ ನಡೆದಿದೆ ಅಂತಾ ಅಧಿಕಾರೊಯೊಬ್ಬರು ಮಾಹಿತಿ ನೀಡಿದ್ದಾರೆ ಅಂತಾ ಹೊಸ ಬಾಂಬ್ ಹಾಕಿದ್ರು ಮಾಜಿ ಸಿಎಂ ಕುಮಾರಸ್ವಾಮಿ.
ಇನ್ನೂ ರೈತರ ಆತ್ಮಹತ್ಯೆ ಬಗ್ಗೆ ಸರ್ಕಾರಕ್ಕೆ ಚಾಟಿಬೀಸುದ್ರು ಕುಮಾರಸ್ವಾಮಿ , ರೈತರ ಆತ್ಮಹತ್ಯೆ ಹೆಚ್ಚಾಗ್ತಿದ್ರು ಸರ್ಕಾರ ಇದರ ಬಗ್ಗೆ ಮಾತಾಡಿಲ್ಲಾ, ಈ ಸಮಯದಲ್ಲೇ ಬೆಂಗಳೂರಿನಲ್ಲಿ ಮಹಾಘಟ್ ಬಂಧನ್ ಸಭೆ ಮಾಡ್ತಿದ್ದಾರೆ ಘಟಬಂಧನ ಮಾಡ್ತಿರೋದು ಅಧಿಕಾರಕ್ಕೆ ಮಾತ್ರ.ಈ ಹಿಂದೆ ಘಟಬಂಧನ್ ಮಾಡಿ ಇಲ್ಲಿಗೆ ಬಂದು ಕೈಕೈ ಹಿಡಿದುಕೊಂಡ್ರುನಂತರ ಏನಾಯ್ತು ಅಂತ ಎಲ್ಲರಿಗೂ ಗೊತ್ತಿದೆಯಲ್ಲ. ಹಾವೇರಿಯಲ್ಲಿ 13ಜನ ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. ಇದರ ಬಗ್ಗೆ ಸದನದಲ್ಲಿ ಚಕಾರ ಎತ್ತಿಲ್ಲಾ ಅಂತಾ ಸರ್ಕಾರದ ವಿರುದ್ದ ಕಿಡಿ ಕಾರಿದ್ರು ಮಾಜಿ ಸಿಎಂ ಕುಮಾರಸ್ವಾಮಿ.