ಡಿಐಜಿ ಡಿ.ರೂಪಾ ಮೂರು ದಿನಗಳೊಳಗಾಗಿ ಬೇಷರತ್ ಕ್ಷಮೆಯಾಚಿಸಬೇಕು. ಇಲ್ಲದಿದ್ರೆ 50 ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಅಂದಿನ ಡಿಜಿ ಎಚ್.ಎನ್ ಸತ್ಯನಾರಾಯಣ್ ರಾವ್ ಲೀಗಲ್ ನೋಟಿಸ್ ಜಾರಿಗೊಳಿಸಿದ್ದಾರೆ.
ಲಂಚ ಪಡೆದು ಶಶಿಕಲಾಗೆ ವಿಶೇಷ ಸವಲತ್ತು ಆರೋಪ ಕೇಸ್ ಕುರಿತಂತೆ ಸತ್ಯನಾರಾಯಣ್ ರಾವ್ ಪರ ವಕೀಲ ಪುತ್ತಿಗೆ .ಆರ್. ರಮೇಶ್, ಡಿ.ರೂಪಾ ಅವರಿಗೆ ನೋಟಿಸ್ ಜಾರಿಗೊಳಿಸಿದ್ದಾರೆ
ಅಗ್ಗದ ಪ್ರಚಾರಕ್ಕಾಗಿ ಡಿ ರೂಪಾ ನನ್ನ ವಿರುದ್ಧ 2 ಕೋಟಿ ರೂಪಾಯಿಗಳ ಸುಳ್ಳು ಆರೋಪ ಮಾಡಿದ್ದಾರೆ. 2 ಕೋಟಿ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಐಟಿ ಇಲಾಖೆಗೆ ದೂರು ನೀಡುತ್ತೇನೆ ಎಂದು ಗುಡುಗಿದ್ದಾರೆ.
ಸಿಬಿಐ, ಲೋಕಾಯುಕ್ತದಂತಹ ಘನತೆವೆತ್ತ ಇಲಾಖೆಗಳಲ್ಲಿ ಕಾರ್ಯನಿರ್ವಹಿಸಿದ ನನಗೆ, ಡಿ.ರೂಪಾ ಅವರು ಮಾಡಿದ ಆರೋಪಗಳಿಂದ ಮಾನಹಾನಿಯಾಗಿದೆ ಎಂದು ಕಾರಾಗೃಹದ ಅಂದಿನ ಡಿಜಿ ಸತ್ಯನಾರಾಯಣ್ ರಾವ್ ನೋಟಿಸ್‌ನಲ್ಲಿ ದಾಖಲಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.