ನಾಲ್ಕು ವರ್ಷದ ಪುಟ್ಟ ಮಗುವಿನ ಮೇಲೆ ಅತ್ಯಾಚಾರವೆಸಗಿದ ಹೇಯ ಘಟನೆ ಜಿಲ್ಲೆಯ ಸೇಡಂ ಪಟ್ಟಣದಲ್ಲಿ ನಡೆದಿದೆ.
ಬಾಲಕಿ ಎಲ್ಕೆಜಿ ವಿದ್ಯಾರ್ಥಿಯಾಗಿದ್ದು ಬಹಿರ್ದೆಸೆಗೆಂದು ಹೋದಾಗ ಸಂತೋಷ್ ಯಾಕಾಪುರ್ (40)ಎಂಬ ಕೀಚಕ ಈ ದುಷ್ಕೃತ್ಯವೆಸಗಿದ್ದಾನೆ.
ನಿನ್ನೆ ಅಮವಾಸ್ಯೆ ನಿಮಿತ್ತ ಬಾಲಕಿ ಶಾಲೆಗೆ ರಜೆ ಇತ್ತು. ಮಲವಿಸರ್ಜನೆಗೆಂದು ಎಂದು ಬಾಲಕಿ ಮನೆಯ ಹಿಂಬದಿಗೆ ಹೋದಾಗ ಅಲ್ಲಿದ್ದ ಆರೋಪಿ ಮಗುವಿನ ಮೇಲೆ ಪೈಶಾಚಿಕ ಕೃತ್ಯವನ್ನೆಸಗಿದ್ದಾನೆ
ಮಗುವನ್ನು ಆಸ್ಪತ್ರೆಗೆ ದಾಖಲಿಸಿ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ.
ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ