ಹಿರಿಯ ಸಂಶೋಧಕ ಎಂ.ಎಂ.ಕಲಬುರಗಿ ಅವರಿಗೆ ದುಷ್ಕರ್ಮಿಗಳು ತೀರಾ ಹತ್ತಿರದಿಂದ ಎದೆ ಮತ್ತು ತಲೆಗೆ ಗುಂಡು ಹಾರಿಸಿದ್ದರು. ಅದರಂತೆ, ಗೌರಿ ಲಂಕೇಶ್ ಅವರನ್ನು ಕೂಡಾ ಹತ್ತಿರದಿಂದ ಎದೆ ಮತ್ತು ತಲೆಗೆ ಗುಂಡು ಹಾರಿಸಿ ಹತ್ಯೆ ಮಾಡಿರುವುದು ನೋಡಿದಲ್ಲಿ ಎರಡೂ ಪ್ರಕರಣಗಳಲ್ಲಿ ಸಾಮ್ಯತೆ ರೀತಿ ಕಂಡು ಬರುತ್ತಿದೆ ಎಂದು ಕಾನೂನು ಖಾತೆ ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.
ಹತ್ಯೆಯ ಹಿಂದೆ ಪಿತೂರಿ ಇರಬಹುದು.ಇದು ಎಂ.ಎಂ. ಕಲಬುರಗಿ ಮಾದರಿಯ ಹತ್ಯೆ ಎನ್ನುವುದನ್ನು ಕೂಡಾ ತಳ್ಳಿಹಾಕುವಂತಿಲ್ಲ ಎಂದು ತಿಳಿಸಿದ್ದಾರೆ.
ಗುಂಡಿನ ಶಬ್ದಗಳನ್ನು ಪಠಾಕಿ ಶಬ್ದ ಎಂದು ತಿಳಿದು ಹೊರಬಂದಿದ್ದ ನೆರೆಹೊರೆಯವರಿಗೆ 55 ವರ್ಷ ವಯಸ್ಸಿನ ಗೌರಿ ಲಂಕೇಶ್ ಹತ್ಯೆಯಾಗಿರುವುದು ಕಂಡು ಬಂದಿದೆ.
ಗೌರಿ ಲಂಕೇಶ್ ಅವರ ಮನೆಯಲ್ಲಿರುವ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಕೆಲ ಮಹತ್ವದ ಸುಳಿವುಗಳು ಲಭ್ಯವಾಗಿವೆ ಎಂದು ಮಾಹಿತಿ ನೀಡಿದ್ದಾರೆ.
ಗೌರಿ ಲಂಕೇಶ್ ಕಳೆದ ವಾರ ನನಗೆ ಕರೆ ಮಾಡಿ ಭೇಟಿಯಾಗಬೇಕು ಎಂದು ತಿಳಿಸಿದ್ದಳು. ಆ ಸಂದರ್ಭದಲ್ಲಿ ನಾನು ಗೃಹ ಸಚಿವನಾಗಿರಲಿಲ್ಲ. ಅಂದೇ ಬರುವಂತೆ ನಾನು ಹೇಳಿದ್ದೆ. ಆದರೆ, ಆಕೆ ಸೋಮುವಾರದಂದು ಬರುವುದಾಗಿ ತಿಳಿಸಿದ್ದಳು. ಆದರೆ ಅವಳು ಬರಲಿಲ್ಲ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.