ಬೆಂಗಳೂರು: ಕರ್ನಾಟಕದಲ್ಲಿ ಸುಮಾರು 3000 ಕೊರೋನಾ ರೋಗಿಗಳು ನಾಪತ್ತೆಯಾಗಿರುವುದಾಗಿ ಸಚಿವ ಆರ್ ಅಶೋಕ್ ಹೇಳಿದ್ದಾರೆ.
ಇವರ ಪತ್ತೆಗಾಗಿ ಈಗ ಪೊಲೀಸರು ಶ್ರಮಿಸುತ್ತಿದ್ದಾರೆ. ಸಚಿವ ಅಶೋಕ್ ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಸುಮಾರು 3000 ಮಂದಿ ಕೊರೋನಾ ರೋಗಿಗಳ ಸಂಪರ್ಕ ತಪ್ಪಿ ಹೋಗಿದೆ. ಈ ವ್ಯಕ್ತಿಗಳು ತಮ್ಮ ಫೋನ್ ಆನ್ ನಲ್ಲಿದ್ದು ಪೊಲೀಸರ ಹುಡುಕಾಟಕ್ಕೆ ಸಹಾಯ ಮಾಡಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ.
ಸುಮಾರು 3000 ದಷ್ಟು ಪಾಸಿಟಿವ್ ಬಂದ ಮಂದಿ ತಮ್ಮ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಇದರಿಂದಾಗಿ ಅವರ ಪತ್ತೆ ಸಾಧ‍್ಯವಾಗುತ್ತಿಲ್ಲ. ಇಂತಹವರಿಂದ ಅಪಾಯ ಜಾಸ್ತಿ. ಹೀಗಾಗಿ ರೋಗ ಹರಡದಂತೆ ಇವರು ಅಧಿಕಾರಿಗಳ ಜೊತೆ ಕೈ ಜೋಡಿಸಬೇಕು ಎಂದು ಸಚಿವರು ಹೇಳಿದ್ದಾರೆ.