ರಾಜ್ಯದಲ್ಲಿ ಈ ಹಿಂದೆ ಕೋಮು ಗಲಭೆಯಿಂದ ಮೃತಪಟ್ಟವರ ಕುಟುಂಬಕ್ಕೆ ತಲಾ 25 ಲಕ್ಷ ರೂಪಾಯಿ ಪರಿಹಾರದ ಚೆಕ್ ವಿತರಣೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಂತ್ರಸ್ತ ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ನೌಕರಿ ನೀಡಲಾಗುವುದು ಎಂದು ತಿಳಿಸಿದ್ದಾರೆ. ಬಿಜೆಪಿ ಸರ್ಕಾರವಿದ್ದಾಗ ಕೋಮ ಗಲಭೆಯಲ್ಲಿ ಸಾವನ್ನಪಿದ್ದವರಿಗೆ 25 ಲಕ್ಷ ರೂಪಾಯಿ ಕೊಟ್ಟಿದ್ದರು. ಕೇವಲ ಹಿಂದುಗಳಿಗೆ ಮಾತ್ರ 25 ಲಕ್ಷ ಕೊಟ್ಟಿದ್ದಾರೆ. ಮುಸ್ಲಿಂನವರು ಸಾವನ್ನಪಿದ್ದರೂ ಅವರಿಗೆ ಕೊಟ್ಟಿರಲಿಲ್ಲ. ಸರ್ಕಾರ ಎಲ್ಲರನ್ನೂ ಸಮಾನವಾಗಿ ನೋಡಬೇಕು. ಇದರ ಬಗ್ಗೆ ನಾನು ಸದನದಲ್ಲಿ ಪ್ರಸ್ತಾಪ ಮಾಡಿದ್ದೆ. ಅವರು ನೋಡ್ತೀವಿ ಅದು ಇದು ಅಂತ ಹೇಳಿದ್ರು ಅಷ್ಟೇ. ಪರಿಹಾರ ಕೊಡುವಾಗ ಸರಿಸಮನಾಗಿ ನೋಡಬೇಕು. ಪ್ರವೀಣ್ ನೆಟ್ಟಾರು, ಹರ್ಷ ಅವರಿಗೆ ಮಾತ್ರ ಪರಿಹಾರ ನೀಡಿದ್ದರು ಎಂದರು.