Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬೆಂಗಳೂರು- ಮೈಸೂರು ರಸ್ತೆಗೆ 200-250 ರೂ. ಟೋಲ್ ಶುಲ್ಕ?

ಬೆಂಗಳೂರು- ಮೈಸೂರು ರಸ್ತೆಗೆ 200-250 ರೂ. ಟೋಲ್ ಶುಲ್ಕ?
bangalore , ಭಾನುವಾರ, 12 ಜೂನ್ 2022 (19:29 IST)
ಮೈಸೂರು-ಬೆಂಗಳೂರು ನಡುವೆ ನಿರ್ಮಾಣವಾಗುತ್ತಿರುವ ದಶಪಥ ರಸ್ತೆಯ ಟೋಲ್ ಶುಲ್ಕ 200ರಿಂದ 250 ರೂ. ನಿಗದಿಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ದಶಪಥ ರಸ್ತೆ ಕಾಮಗಾರಿ ದಸರಾ ವೇಳೆಗೆ ಮುಕ್ತಾಯವಾಗಿ ಸಾರ್ವಜನಿಗೆ ಬಳಕೆಗೆ ಲಭಿಸಲಿದೆ ಎಂದು ಸಂಸದ ಪ್ರತಾಪ್ ಸಿಂಹ ಪದೇಪದೆ ಹೇಳುತ್ತಿದ್ದಾರೆ. ಆದರೆ ಈ ರಸ್ತೆಗೆ ಸುಂಕ ನಿಗದಿಪಡಿಸಲಿದ್ದು, ಇದರ ಮೊತ್ತ ಎಷ್ಟಾಗಬಹುದು ಎಂಬ ಗುಟ್ಟು ಬಿಟ್ಟುಕೊಡುತ್ತಿಲ್ಲ.
ಮೂಲಗಳ ಪ್ರಕಾರ ಮೈಸೂರು- ಬೆಂಗಳೂರು ರಸ್ತೆಯಲ್ಲಿ ಪ್ರಯಾಣಿಸಬೇಕಾದರೆ ಅಂದಾಜು 200-250 ರೂ. ಸೇವಾ ಶುಲ್ಕ ಇರಲಿದೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕೃತವಾಗಿ ಆದೇಶ ಹೊರಡಿಸಿಲ್ಲವಾದರೂ ಪ್ರತಿ ಕಿ.ಮೀ.ಗೆ 1.5ನಿಂದ 2ರೂ. ಸುಂಕ ವಸೂಲಿಗೆ ಅಂದಾಜಿಸಲಾಗಿದೆ. ಇದರ ಪ್ರಕಾರ 117 ಕಿ.ಮೀ. ದೂರದ  ಬೆಂಗಳೂರು -ಮೈಸೂರು ಹೆದ್ದಾರಿಯಲ್ಲಿ ಪ್ರಯಾಣ ಮಾಡಲು 200 ರಿಂದ 250 ರೂ. ಸುಂಕ ಪಾವತಿ ಮಾಡಬೇಕಾಗಿ ಬರಬಹುದು.
ಈಗಾಗಲೇ ಎರಡು ಕಡೆಗಳಲ್ಲಿ ಟೋಲ್ ಪ್ಲಾಜಾಗಳ ನಿರ್ಮಾಣ ಆಗಿದ್ದು, ಒಂದು ಶ್ರೀರಂಗಪಟ್ಟಣದ ನಂತರ ಗಾಣಗೂರು ಬಳಿ ಇದ್ದರೆ, ಮತ್ತೊಂದು ಕುಂಬಳಗೋಡು ಸಮೀಪದ ಕಣಮಿಣಿಕೆಯಲ್ಲಿ ನಿರ್ಮಾಣವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಪತ್ರೆಗೆ ದಾಖಲಾದ ಸೋನಿಯಾ ಗಾಂಧಿ!