ಎರಡು ಲಕ್ಷ ರೂಪಾಯಿಯಲ್ಲಿ ಒಂದೇ ಕೋಣೆ ನಿರ್ಮಾಣ ಮಾಡೋದು ಕಷ್ಟ. ಅಂಥದ್ರಲ್ಲಿ ಕೇವಲ 50 ಸಾವಿರ ರೂಪಾಯಿಗೆ ಎರಡು ಕೋಣೆ ನಿರ್ಮಾಣ ಮಾಡೋದಾಗಿ ಕಂಪನಿಯೊಂದು ಜನರಿಂದ ಹಣ ಪಡೆದುಕೊಂಡಿದೆ.
ಈಗ ಪೊಲೀಸರು ಕಂಪನಿಯ ನೈಜತೆ ಪರಿಶೀಲಿಸಲು ಮುಂದಾಗಿದ್ದಾರೆ. ಆ ಮೂಲಕ ಐಎಂಎ ಮಾದರಿ ಕಂಪನಿ ಗಡಿ ಜಿಲ್ಲೆಗಳಲ್ಲಿ ಸದ್ದಿಲ್ಲದೇ ಜನರಿಗೆ ಮಂಕು ಬೂದಿ ಎರಚುತ್ತಿದ್ದೆಯಾ ಎನ್ನುವ ಅನುಮಾನ ವ್ಯಕ್ತವಾಗತೊಡಗಿದೆ.
ಬೆಂಗಳೂರು ಮೂಲದ ಸಂಸ್ಥೆಯೊಂದು ಕೇವಲ 50 ಸಾವಿರ ರೂಪಾಯಿಗಳಲ್ಲಿ ಎರಡು ಕೋಣೆಗಳನ್ನು ನಿರ್ಮಿಸಿಕೊಡೋದಾಗಿ ಹೇಳಿ ನೂರಾರು ಜನರಿಂದ ತಲಾ ಐವತ್ತು ಸಾವಿರ ರೂಪಾಯಿ ಪಡೆದುಕೊಂಡಿರುವ ಪ್ರಕರಣ ಬೀದರ್, ಕಲಬುರಗಿ ಜಿಲ್ಲೆಗಳಲ್ಲಿ ನಡೆದಿದೆ.
ಈ ವಿಷಯ ಇದೀಗ ಪೊಲೀಸ್ ಇಲಾಖೆ ಗಮನಕ್ಕೆ ಬಂದಿದ್ದು, ಸಂಸ್ಥೆಯ ಪೂರ್ವಾಪರ ತಿಳಿಯಲು ಖಾಕಿ ಪಡೆ ತನಿಖೆ ನಡೆಸುತ್ತಿದೆ. ಬೀದರ್ ನಲ್ಲಿ ಶಾಖೆ ಹಾಗೂ ಬೆಂಗಳೂರಿನಲ್ಲಿ ಮುಖ್ಯ ಕಚೇರಿಯನ್ನು ಈ ಕಂಪನಿ ಹೊಂದಿದೆ.
ಜನತೆ ಫ್ರಾಡ್ ಮಾಡುವ ಕಂಪನಿಗಳಿಂದ ಎಚ್ಚರಿಕೆಯಿಂದ ಇರಬೇಕು. ಹೀಗಂತ ಬೀದರ್ ಎಸ್ಪಿ ಟಿ.ಶಶಿಧರ್ ತಿಳಿಸಿದ್ದಾರೆ.