ತುರ್ತು ಪರಿಸ್ಥಿತಿಯಲ್ಲಿ ರೋಗಿಗಳನ್ನು ಸಾಗಿಸಬೇಕಿರುವ 108 ಅಂಬುಲೆನ್ಸ್ ಗೇ ತುರ್ತು ಚಿಕಿತ್ಸೆ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಬೆಳಗಾವಿ ಜಿಲ್ಲೆಯ ಅಥಣಿ ಆಸ್ಪತ್ರೆಯಲ್ಲಿರುವ 108 ಅಂಬುಲೆನ್ಸ್ ಗೆ ಜೋರ್ ಲಗಾ ಕೇ ಹೈಸಾ ಎನ್ನುತ್ತಲೇ ಸ್ಟಾರ್ಟ್ ಮಾಡಬೇಕಾದ ಪರಿಸ್ಥಿತಿ ಇದೆ. ಪ್ರತಿ ದಿನವೂ ಬೆಳಿಗ್ಗೆ 108 ಅಂಬುಲೆನ್ಸ್ ಗೆ ಡಕ್ಕಲ್ ಸ್ಟಾರ್ಟ್ ಮಾಡಬೇಕಾದ ದುಃಸ್ಥಿತಿಯಿದೆ.
ಅಥಣಿ ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಅಂಬ್ಯುಲೆನ್ಸ್ ಗಳು ಅವ್ಯವಸ್ಥೆಯಿಂದ ಕೂಡಿದ್ದು, ದುರಸ್ಥಿಗೆ ಕಾದಿವೆ. ಈ ವಾಹನಗಳನ್ನು ದುರಸ್ತಿ ಮಾಡದೇ ವಾಹನಗಳ ಬಳಕೆ ಮಾಡುತ್ತಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ವಾಹನಗಳು ಹದಗೆಟ್ಟಿರುವುದರಿಂದಾಗಿ ತುರ್ತು ಪರಿಸ್ಥಿತಿಯಲ್ಲಿ ರೋಗಿಗಳು ಹೈರಾಣಾಗುವಂತಾಗಿದೆ. ರೋಗಿಯನ್ನು ಸಾಗಾಟ ಮಾಡಬೇಕಾದರೆ ರೋಗಿಯ ಸಂಬಂಧಿಗಳೇ ವಾಹನ ತಳ್ಳಬೇಕಾದ ಸ್ಥಿತಿ ಇಲ್ಲಿದೆ.