ಬೆಂಗಳೂರು : ಉಪಚುನಾವಣೆಯ ಹಿನ್ನಲೆಯಲ್ಲಿ ಯಶವಂತಪುರ ಕ್ಷೇತ್ರದ ಪ್ರಚಾರದಲ್ಲಿ ತೊಡಗಿಕೊಳ್ಳದೆ ಕಾಂಗ್ರೆಸ್ ನಾಯಕರು ಕ್ಷೇತ್ರದ ಬಗ್ಗೆ ಕಾಂಗ್ರೆಸ್ ನಾಯಕರ ಅಸಡ್ಡೆ ತೋರುತ್ತಿದ್ದಾರೆ ಎನ್ನಲಾಗಿದೆ.
ಯಶವಂತಪುರ ಕ್ಷೇತ್ರದಲ್ಲಿ ಒಂದು ದಿನ ಮಾತ್ರ ಸಿದ್ದರಾಮಯ್ಯ ಪ್ರಚಾರದಲ್ಲಿ ಭಾಗಿಯಾಗಿದ್ದರು. ಹಾಗೇ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೇವಲ 2 ತಾಸು ಪ್ರಚಾರ ನಡೆಸಿದ್ದಾರೆ. ಉಳಿದಂತೆ ರಾಜ್ಯದ ಯಾವ ಕಾಂಗ್ರೆಸ್ ನಾಯಕರು ಯಶವಂತಪುರ ಕ್ಷೇತ್ರದತ್ತ ತಲೆ ಹಾಕಲಿಲ್ಲ.
ಅಲ್ಲದೇ ಸ್ವತಃ ಉಪ ಚುನಾವಣೆ ಉಸ್ತುವಾರಿ ಎಂ ಕೃಷ್ಣಪ್ಪ ಕೂಡ ಯಶವಂತಪುರ ಕ್ಷೇತ್ರದ ಬಗ್ಗೆ ಅಸಡ್ಡೆ ತೋರಿದ್ದಾರೆ ಎನ್ನಲಾಗಿದೆ. ಈ ಎಲ್ಲಾ ವಿಚಾರಗಳನ್ನು ಗಮನಿಸಿದರೆ ಕಾಂಗ್ರೆಸ್ ಜೆಡಿಎಸ್ ಜೊತೆಗೆ ಒಳ ಒಪ್ಪಂದ ಮಾಡಿಕೊಂಡಿದ್ದು, ಪ್ರಚಾರದ ನಿರಾಸಕ್ತಿಗೆ ಇದೇ ಕಾರಣವೇ? ಎಂಬ ಅನುಮಾನ ವ್ಯಕ್ತವಾಗುತ್ತಿದೆ.