Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಗರದ ಮೂರು ಸ್ಥಳಗಳ ಸುಂದರೀಕರಣಗೊಳಿಸಿದ ಕೇಂದ್ರ ವಸತಿ ಸಚಿವಾಲಯ

ನಗರದ ಮೂರು ಸ್ಥಳಗಳ ಸುಂದರೀಕರಣಗೊಳಿಸಿದ ಕೇಂದ್ರ ವಸತಿ ಸಚಿವಾಲಯ
bangalore , ಬುಧವಾರ, 6 ಅಕ್ಟೋಬರ್ 2021 (20:29 IST)
ಬೆಂಗಳೂರು: ಭಾರತ ಸ್ವಾತಂತ್ರ‍್ಯದ 75 ವರ್ಷಗಳ ಪ್ರಗತಿಶೀಲ ಭಾರತವನ್ನು ಮತ್ತು ಇಲ್ಲಿನ ಜನರು, ಸಂಸ್ಕೃತಿ ಮತ್ತು ಸಾಧನೆಗಳ ವೈಭವಯುತ ಇತಿಹಾಸವನ್ನು ಸಂಭ್ರಮಿಸುವ, ವಿಕಸನ ಶೀಲ ಭಾರತದ ಪಯಣದಲ್ಲಿ ಪ್ರಮುಖ ಪಾತ್ರವಹಿಸಿದ  ಪ್ರಧಾನಮಂತ್ರಿಗಳ ದೂರದೃಷ್ಟಿ ಆತ್ಮನಿರ್ಭರ ಭಾರತದಿಂದ ಉತ್ತೇಜಿತವಾದ ಭಾರತ 2.0ಗೆ ಶಕ್ತಿ ಮತ್ತು ಸಾಮರ್ಥ್ಯವನ್ನು  ತಮ್ಮೊಡಲಲ್ಲಿ ಇಟ್ಟುಕೊಳ್ಳುವವರಿಗಾಗಿ ಈ ಉತ್ಸವವು ಸಂಪದ್ಭರಿತವಾಗಿದೆ ಎಂದು ಭಾರತ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ತಿಳಿಸಿದೆ. 
 
ಭಾರತ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದಡಿಯಲ್ಲಿನ ಸ್ಮಾರ್ಟ್ ಸಿಟಿ ಅಭಿಯಾನವು 100 ಸ್ಮಾರ್ಟ್ ಸಿಟಿಗಳಲ್ಲಿ ಸೆಪ್ಟೆಂಬರ್ 26ರಿಂದ ಅಕ್ಟೋಬರ್ 03 ರವರೆಗೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಈ ಕಾರ್ಯಕ್ರಮಗಳು  ಸ್ವಾತಂತ್ರ‍್ಯದ ಅಮೃತ ಮಹೋತ್ಸವದ 75 ವಾರಗಳ ಸಂಭ್ರಮಾಚರಣೆ ಅಝಾದಿ ಕಾ ಅಮೃತ ಮಹೋತ್ಸವ ಭಾಗವಾಗಿತ್ತು. ತಮ್ಮ ನಗರಗಳಲ್ಲಿ ಸಾರ್ವಜನಿಕ ಸ್ಥಳಗಳನ್ನು ಮರು ರೂಪಿಸುವ ಉದ್ದೇಶದೊಂದಿಗೆ ನಗರಗಳು 75 ಗಂಟೆಗಳ ನಗರ ರೂಪಾಂತರ ಅನುಷ್ಟಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸಲಹೆ ನೀಡಲಾಗಿದೆ ಎಂದಿದೆ. 
 
ಅದರಂತೆ ಬೆಂಗಳೂರು ಸ್ಮಾರ್ಟ್ ಸಿಟಿಯು ಅಕ್ಟೋಬರ್ 1ರಿಂದ ಅಕ್ಟೋಬರ್ 3 ರವರೆಗೆ ಆಝಾದಿ ಕಾ ಅಮೃತ ಮಹೋತ್ಸವದ ಭಾಗವಾಗಿ ಈ ಕೆಳಕಂಡ ಕಾರ್ಯಕ್ರಮಗಳನ್ನು ಆಯೋಜಿಸಿತ್ತು ಎಂದು ತಿಳಿಸಿದೆ  
 
75 ಗಂಟೆಗಳ ಪ್ಲೇಸ್ ಮೇಕಿಂಗ್ ಮ್ಯಾರಥಾನ್:
 
ಪ್ಲೇಸ್ ಮೇಕಿಂಗ್: ಸಾರ್ವಜನಿಕ ಸ್ಥಳಗಳ ರೂಪಾಂತರ ಹಾಗೂ ಈ ಸ್ಥಳದೊಂದಿಗೆ ಜನರನ್ನು ಇನ್ನಷ್ಟು ಬೆಸೆಯುವ ಗುರಿಯೊಂದಿಗೆ ಈ ಕೆಳಕಂಡ ಸ್ಥಳಗಳಲ್ಲಿ 75 ಗಂಟೆಗಳ ಪ್ಲೇಸ್ ಮೇಕಿಂಗ್ ಮ್ಯಾರಥಾನ್ ಕೈಗೊಳ್ಳಲಾಗಿದೆ ಎಂದಿದೆ.  
 
ಅಕ್ಕಿತಿಮ್ಮನಹಳ್ಳಿ ಅಂಗನವಾಡಿಯಲ್ಲಿ 75 ಗಂಟೆಗಳ ಪ್ಲೇಸ್ ಮೇಕಿಂಗ್ ಅಭಿವೃದ್ಧಿ:
 
ನೆರೆ ಹೊರೆ ನೆರವು ಸವಾಲು ಕಾರ್ಯಕರ್ಮದಡಿ ಮಕ್ಕಳ ಬದುಕು ಹಸನಾಗಿಸುವ ಉದ್ದೇಶದಿಂದ ಅಂಗನವಾಡಿಗಳ ಪುನರುಜ್ಜೀವನ, ಚಿಣ್ಣರಿಗೆ ಮಕ್ಕಳ ಸ್ನೇಹಿ ಆಟದ ಮೈದಾನ ಕಲ್ಪಿಸುವ ಉದ್ದೇಶದೊಂದಿಗೆ ಅಕ್ಕಿತಿಮ್ಮನಹಳ್ಳಿ ಅಂಗನವಾಡಿ  ಮತ್ತು ಶಾಲಾ ಆವರಣವನ್ನು ಅಭಿವೃದ್ಧಿಗೊಳಿಸಲಾಗಿದೆ ಎಂದು ಮಾಹಿತಿ ನೀಡಿದೆ. 
 
ಸ್ಯಾಂಡ್ ಫಿಟ್‌ ಆಟದ ಮೈದಾನ ಹಾಗೂ ಆಟದ ಸಾಮಾಗ್ರಿಗಳನ್ನು ಅಳವಡಿಕೆ: 
 
ಅಂಗನವಾಡಿಗೆ ಹೋಗಲು ಪಾಥ್‌ವೇ ನಿರ್ಮಾಣ, ಶಾಲೆಯ ಹೊರಗೋಡೆ ಮತ್ತು ಕಾಪೌಂಡ್‌ ಗೋಡೆಯ ಮೇಲೆ ಆರಕ್ಷಕ ಚಿತ್ರಕಲೆ ವಿನ್ಯಾಸ, ಸ್ಕಿಡ್ ಆಗದ ಟೈಲ್ಸ್ ಅಳವಡಿಕೆ, ಮಕ್ಕಳ ಎತ್ತರಕ್ಕೆ ಅನುಗುಣವಾಗಿ ವಾಶ್‌ ಬೇಸಿನ್‌ ಎಸ್.ಎಸ್ ರೈಲಿಂಗ್ ಅನ್ನು ಅಳವಡಿಸಲಾಗಿದೆ ಎಂದಿದೆ. 
 
ಕೆ.ಆರ್ ಮಾರುಕಟ್ಟೆ ಜಂಕ್ಷನ್‌ ಪ್ಲೇಸ್ ಮೇಕಿಂಗ್: 
 
ಜನನಿಬಿಡ ಪ್ರದೇಶವಾಗಿದ್ದು, ಕಸ ಬೇರ್ಪಡಿಸುವ ಹಾಗೂ ಅವ್ಯವಸ್ಥಿತ ಆಟೋ ಮತ್ತು ಬಸ್ಸು ತಂಗುದಾಣವಾಗಿತ್ತು. ಈ ಸ್ಥಳದಲ್ಲಿ ಜಂಕ್ಷನ್‌ ಐಲ್ಯಾಂಡ್‌ ಅನ್ನು ನಿರ್ಮಿಸಿ, 75 ಗಂಟೆಗಳ ಪ್ಲೇಸ್ ಮೇಕಿಂಗ್ ನಲ್ಲಿ "ಐ ಲವ್  ಬೆಂಗಳೂರು” ಸ್ಮಾರಕವನ್ನು ನಿರ್ಮಿಸಿ ಹಾಗೂ ಸಾರ್ವಜನಿಕರಿಗೆ ಕೂರಲು ಸಹ ಆಕರ್ಷಕ ಕಲ್ಲಿನ ಆಸನಗಳನ್ನು ಅಳವಡಿಸಲಾಗಿರುತ್ತದೆ. ಈ ಸೌಂದರೀಕರಣವು ಹೆಚ್ಚಿನ ಜನರನ್ನು ಸೆಳೆಯುತ್ತಿದ್ದು, ಸೆಲ್ಫಿ ಪಾಯಿಂಟ್‌ ಆಗಿ ಮಾರ್ಪಾಡಾಗಿದೆ ಎಂದು ಹೇಳಿದೆ. 
 
ಬಾಲಭವನದಲ್ಲಿ ಪ್ಲೇಸ್ ಮೇಕಿಂಗ್:
 
ಬಾಲಭವನದ ಆಡಿಟೋರಿಯಂ ಮುಂಬಾಗದಲ್ಲಿ 2000 ಚ ಅಡಿಯ ಖಾಲಿ ಜಾಗದಲ್ಲಿ ಈ ಹಿಂದೆ ಖಾಲಿ ನೆಲಹಾಸು ಇದ್ದು, ಮಕ್ಕಳು ಕೂತು ಊಟ ಹಾಗೂ ಆಟವಾಡಲು ವ್ಯವಸ್ಥಿತವಾಗಿರುವುದಿಲ್ಲ. ಮಕ್ಕಳಿಗೆ ಆರೋಗ್ಯಕರ ಮತ್ತು ಉಲ್ಲಾಸಕರ ವಾತಾವರಣವನ್ನು ಸೃಷ್ಟಿಸಲು 75 ಗಂಟೆಗಳಲ್ಲಿ ಪೂರ್ಣಗೊಳಿಸಿ ಸೌಂದರೀಕರಣಗೊಳಿಸಲಾಗುತ್ತಿದೆ. ಮಕ್ಕಳ ಸ್ನೇಹಿ ವಿಶೇಷವಾಗಿ ವಿನ್ಯಾಸಗೊಳಿಸಿದ ಕಲ್ಲಿನ ಬೆಂಚ್‌ ಗಳನ್ನು ಮತ್ತು ಮಕ್ಕಳು ಆಟವಾಡಲು ನೆಲಹಾಸನ್ನು ಸೌಂದರೀಕರಣಗೊಳಿಸಿ ಜಾರು ರಹಿತವಾದ ಗ್ರಾನೆಟ್‌ ಅನ್ನು ಅಳವಡಿಸಲಾಗಿದೆ ನೈಸರ್ಗಿಕವಾಗಿ ನೆರಳು ಬೀಳುವ ಪ್ರದೇಶವಾಗಿದ್ದು, ನೆಲಹಾಸನ್ನು ಮಕ್ಕಳಿಗೆ ಉಲ್ಲಾಸ ನೀಡುವ ನಲಿವಿನ ತಾಣವಾಗಿ ಪರಿವರ್ತಿಸಲಾಗಿದೆ ಎಂದು ಮಾಹಿತಿ ನೀಡಿದೆ.
ba

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆ ವೈದ್ಯರ ಧರಣಿ ಯಾಕೆ ಅಂತೀರಾ? ಇಲ್ಲಿದೆ ಮಾಹಿತಿ