Webdunia - Bharat's app for daily news and videos

Install App

ಸೀತಾನದಿ ಹರಿದಿದೆ ನೋಡಿ

Webdunia
ಭಾನುವಾರ, 23 ಅಕ್ಟೋಬರ್ 2016 (10:55 IST)
ಬೆಂಗಳೂರು: ಕನ್ನಡ ಸಿನಿಮಾ ಲೋಕದಲ್ಲಿ ಹೊಸದೊಂದು ಸಿನಿಮಾ ಬಿಡುಗಡೆಯಾಗಿದೆ . “ಸೀತಾ ನದಿ” ಇದರ ಹೆಸರು. ಕೆ. ಶರತ್ ಇದರ ನಿರ್ದೇಶಕರು.

ಒಬ್ಬಳು ಮುಗ್ದ ಹುಡುಗಿ. ಅಮ್ಮನ ಪ್ರೀತಿಯ ಬೆಚ್ಚನೆಯ ಗೂಡಿನಲ್ಲಿದ್ದವಳು, ಸ್ವಚ್ಛಂದವಾಗಿ ಹಾರಾಡಿಕೊಂಡಿದ್ದವಳು.. ಅಕಸ್ಮಾತ್ತಾಗಿ ಅವಳ ಬದುಕಿನಲ್ಲಿ ನಡೆಯುವ ಕೆಟ್ಟ ಘಟನೆ ಅವಳ ಜೀವನವನ್ನು ಹೇಗೆ ಆಟ ಆಡಿಸುತ್ತೆ ಎನ್ನುವುದು ಚಿತ್ರದ ಸಾರಾಂಶ.

ಸೀತಾನದಿ ಚಿತ್ರದ ತಿರುಳು ಸಮಾಜದಲ್ಲಿ ಹಲವು ಕಡೆ ನಾವಿಂದು ನೋಡುವ ಸತ್ಯ ಘಟನೆಯ ಸ್ಯಾಂಪಲ್. ಹೀಗಾಗಿ ಸಿನಿಮಾ ನಮಗೊಂದು ಪಾಠವಾಗುತ್ತದೆ, ಸಂದೇಶ ಕೊಡುತ್ತದೆ. ಹಾಗಂತ ಯಾವುದನ್ನೂ ಅತಿಯಾಗಿ ವೈಭವೀಕರಿಸಿಲ್ಲ ಎನ್ನುವುದು ಮೆಚ್ಚುವಂತಹ ಅಂಶ.

ಹಳ್ಳಿಯ ಹಿನ್ನೆಲೆಯಲ್ಲಿ ಕತೆ ಸಾಗುವುದರಿಂದಲೋ ಏನೋ. ನಮಗೆ ಅಲ್ಲಿ ಬರುವ ಸಂಭಾಷಣೆಗಳು, ಅಭಿನಯ ಆಪ್ತವೆನಿಸುತ್ತದೆ. ಕೆಲವು ಧಾರವಾಹಿಗಳಲ್ಲಿ ಅಭಿನಯಿಸಿದ ಅನುಭವವಿರುವುದರಿಂದ ನಾಯಕಿ ಶ್ರೇಯಾ ತಮ್ಮ ಪಾತ್ರವನ್ನು ಸರಿಯಾಗಿ ನಿಭಾಯಿಸಿದ್ದಾರೆ. ಹೊನ್ನವಳ್ಳಿ ಕೃಷ್ಣ ಎಂದಿನಂತೆ ಸಹಜಾಭಿನಯದ ಮೂಲಕ ಗಮನ ಸೆಳೆಯುತ್ತಾರೆ.

ಸಮಾಜಕ್ಕೆ ಹಲವು ಸಂದೇಶಗಳನ್ನು ಕೊಡುವ ಭರದಲ್ಲಿ ಕೆಲವು ಅನಗತ್ಯ ದೃಶ್ಯಗಳು ಬಂದು ಹೋದರೆ ನೀವು ಅದನ್ನು ಕ್ಷಮಿಸಬೇಕು.  ಆದರೆ ವಾಸ್ತವಿಕತೆಯ ಕತೆಯುಳ್ಳ ಸಿನಿಮಾವನ್ನು ನೋಡಲು ಬಯಸುವವರು ಒಮ್ಮೆ ಇದನ್ನು ನೋಡಲು ಅಡ್ಡಿಯಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments