ಬಿಗ್ ಬಾಸ್ ಕನ್ನಡ ಸೀಸನ್ 10 ಆರಂಭಕ್ಕೆ ಕ್ಷಣಗಣನೆ ಆರಂಭ ಆಗಿದೆ. ಈ ಬಾರಿ ದೊಡ್ಮನೆಗೆ ಯಾರೆಲ್ಲ ಬರ್ತಾರೆ ಎನ್ನುವ ಬಗ್ಗೆ ಕುತೂಹಲ ಮೂಡಿದೆ. ಈಗಾಗಲೇ ಆಯ್ಕೆ ಬಹುತೇಕ ಪೂರ್ಣಗೊಂಡಿದೆ ಎಂದು ಹೇಳಲಾಗುತ್ತಿದೆ. ಈ ಮಧ್ಯೆ ಸುದೀಪ್ ಅವರು ಬಿಗ್ ಬಾಸ್ ಪ್ರಸಾರದ ಸಮಯ ತಿಳಿಸಿದ್ದಾರೆ. ಹೊಸ ಪ್ರೋಮೋ ಮೂಲಕ ಈ ವಿಚಾರವನ್ನು ರಿವೀಲ್ ಮಾಡಲಾಗಿದೆ. ಪ್ರತಿ ದಿನ ರಾತ್ರಿ 9:30ಕ್ಕೆ ಬಿಗ್ ಬಾಸ್ ಆರಂಭ ಆಗಲಿದೆ. ಈ ವಿಚಾರವನ್ನು ಹೊಸ ಪ್ರೋಮೋ ಮೂಲಕ ತಿಳಿಸಲಾಗಿದೆ. ಇನ್ನು, ಸ್ಪರ್ಧಿಗಳನ್ನು ಪರಿಚಯಿಸುವ ದಿನ ಅಕ್ಟೋಬರ್ ನ ಮೊದಲವಾರದಲ್ಲೆ ಆರಂಭವಾಗುತ್ತದೆ ಅಂತಾ ಹೇಳಿದ್ದಾರೆ.