ಬೆಂಗಳೂರು: ಕೊರೋನಾ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಚಿತ್ರಮಂದಿರಗಳಲ್ಲಿ ಕೇವಲ 50 ಶೇಕಡಾ ಪ್ರೇಕ್ಷಕರಿಗೆ ಅವಕಾಶ ಕೊಟ್ಟಿದ್ದರಿಂದ ಯುವರತ್ನ ಚಿತ್ರತಂಡ ಸಂಕಷ್ಟಕ್ಕೆ ಸಿಲುಕಿತ್ತು.
ಬಿಡುಗಡೆಯಾದ ಎರಡೇ ದಿನಕ್ಕೆ ಚಿತ್ರಮಂದಿರಗಳಲ್ಲಿ ಅರ್ಧ ಹಾಜರಾತಿಗೆ ಅವಕಾಶ ಎಂದು ಸರ್ಕಾರ ಘೋಷಣೆ ಮಾಡಿದ್ದರಿಂದ ಚಿತ್ರದ ಗಳಿಕೆ ಮೇಲೆ ಭಾರೀ ಪೆಟ್ಟು ಬಿದ್ದಿತ್ತು. ಈ ಬಗ್ಗೆ ಸ್ವತಃ ನಾಯಕ ನಟ ಪುನೀತ್ ರಾಜಕುಮಾರ್, ನಿರ್ದೇಶಕ ಸಂತೋಷ್ ಆನಂದ್ ರಾಮ್, ನಿರ್ಮಾಪಕ ವಿಜಯ್ ಕಿರಗಂದೂರ್ ಸಿಎಂ ಜೊತೆ ಸಭೆ ನಡೆಸಿ ಶೇ. 100 ಪ್ರೇಕ್ಷಕರಿಗೆ ಅನುಮತಿ ನೀಡುವಂತೆ ಮನವಿ ಮಾಡಿದ್ದರು.
ನಿನ್ನೆ ಸಂಜೆ ಸಿಎಂ ಜೊತೆ ಮಾತುಕತೆ ನಡೆಸಿದ ಯುವರತ್ನ ತಂಡ ರಾತ್ರಿ ವೇಳೆ ಖುಷಿಯಾಗುವ ಸುದ್ದಿಯೊಂದನ್ನು ನೀಡಿದೆ. ಇನ್ನು ಮೂರು ದಿನಗಳ ಕಾಲ ಅಂದರೆ ಏಪ್ರಿಲ್ 7 ರವರೆಗೆ ಶೇ.100 ಪ್ರೇಕ್ಷಕರಿಗೆ ಅನುಮತಿ ನೀಡಿ ಸಿಎಂ ಯಡಿಯೂರಪ್ಪ ಯುವರತ್ನ ತಂಡಕ್ಕೆ ಕಾಲಾವಕಾಶ ನೀಡಿದೆ. ಇದರಿಂದಾಗಿ ಇನ್ನು ಮೂರು ದಿನ ಥಿಯೇಟರ್ ಗಳಲ್ಲಿ ಫುಲ್ ಹಾಜರಾತಿ ಇರಬಹುದು. ಅದಾದ ಬಳಿಕ ಮತ್ತೆ ಶೇ. 50 ರ ನಿಯಮ ಪಾಲಿಸಬೇಕಾಗುತ್ತದೆ.