Webdunia - Bharat's app for daily news and videos

Install App

ಯೆಸ್, ಐಯಾಮ್ ಇನ್ ಲವ್: ಲೂಸ್ ಮಾದ

Webdunia
ಶುಕ್ರವಾರ, 7 ಅಕ್ಟೋಬರ್ 2016 (12:07 IST)
ಸ್ಯಾಂಡಲ್‌ವುಡ್‌ನ ಮೋಸ್ಟ್ ಎಲಿಜಿಬಲ್ ಬ್ಯಾಚಲರ್‌ಗಳ ಪೈಕಿ ಲೂಸ್ ಮಾದ ಖ್ಯಾತಿಯ ಯೋಗಿ ಸಹ ಒಬ್ಬರು. ಅನೇಕ ಸಿನಿಮಾಗಳಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದ ಅವರು ರೀಯಲ್ ಲೈಫ್‌ಲ್ಲೂ ಪ್ರೇಮಿಯಾಗಿದ್ದಾರಾ ಎಂಬ ಸಂಶಯ ಎಲ್ಲರಲ್ಲಿತ್ತು. ಕಾರಣ ಕಾರ್ಯಕ್ರಮಗಳಲ್ಲಿ ಆಗಾಗ ಅವರು ಅಪರಿಚಿತ ಯುವತಿಯ ಜತೆ ಕಾಣಿಸಿಕೊಳ್ಳುತ್ತಿದ್ದುದು. ಆದರೆ ಆಕೆ ಯಾರು ಎಂಬುದನ್ನು ಮಾತ್ರ ಯೋಗಿ ಗುಟ್ಟಾಗಿಟ್ಟಿದ್ದರು. ಮತ್ತೀಗ ಅವರ ಸ್ನೇಹಿತರು ಆಕೆ ಯೋಗಿ ಪ್ರಿಯತಮೆ ಎಂಬುದನ್ನು ಬಾಯ್ಬಿಟ್ಟಿದ್ದಾರೆ. 
 
ನಿಮ್ಮ ಮದುವೆ ಯಾವಾಗ ಎಂಬ ಪ್ರಶ್ನೆಯನ್ನು ಮುಂದಿಟ್ಟಾಗ ಸದಾ ನಾಚಿ ನುಣುಚಿಕೊಳ್ಳುತ್ತಿದ್ದ ಯೋಗಿ ಸಹ ಈ ಬಾರಿ ಬಾಯ್ಬಿಟ್ಟಿದ್ದಾರೆ. ಹೌದು ನಾನು ಪ್ರೀತಿಯಲ್ಲಿ ಬಿದ್ದಿದ್ದೇನೆ. ಐಟಿ ಉದ್ಯೋಗಿಯಾಗಿರುವ ಸಾಹಿತ್ಯ ಎಂಬುವವಳ ಜತೆ ಕಳೆದೆರಡು ವರ್ಷಗಳಿಂದ ಪ್ರೀತಿಯಲ್ಲಿದ್ದೇನೆ. ಕಳೆದ 13 ವರ್ಷಗಳ ಸ್ನೇಹ ನಮ್ಮದು. ನಮ್ಮಿಬ್ಬರ ಪ್ರೀತಿ ವಿಷಯ ಎರಡು ಕುಟುಂಬಗಳಿಗೂ ಗೊತ್ತಿದೆ. ನನ್ನ ತಾಯಿ ಆಕೆಯನ್ನು ಮಗಳಂತೆ ಪ್ರೀತಿಸುತ್ತಾರೆ. ನನಗೂ ಆಕೆಯ ಕುಟುಂಬದ ಬಗ್ಗೆ ಅಪಾರ ಗೌರವವಿದೆ. ಹೆಚ್ಚಿನ ವಿಷಯವನ್ನು ಸಮಯ ಬಂದಾಗ ಹೇಳುತ್ತೇನೆ ಎನ್ನುತ್ತಾರೆ ಯೋಗಿ.
 
ಸರಿ ನಿಮ್ಮ ಮದುವೆ ಊಟವನ್ನು ಯಾವಾಗ ಹಾಕಿಸುತ್ತೀರಿ ಎಂದರೆ ಅದಕ್ಕೆ ಮತ್ತೊಂದು ವರ್ಷ ಕಾಯಬೇಕು ಎಂದರು ಯೋಗಿ.
 
ಯೋಗಿ ಅವರಿಗೆ 5 ವರ್ಷ ಹಿರಿಯವನಾದ ಅಣ್ಣನಿದ್ದು ಅವರಿಗೆ ಮುಂದಿನ ತಿಂಗಳು ಮದುವೆ ಎನ್ನಲಾಗುತ್ತಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments