ಸ್ಯಾಂಡಲ್ವುಡ್ನ ಮೋಸ್ಟ್ ಎಲಿಜಿಬಲ್ ಬ್ಯಾಚಲರ್ಗಳ ಪೈಕಿ ಲೂಸ್ ಮಾದ ಖ್ಯಾತಿಯ ಯೋಗಿ ಸಹ ಒಬ್ಬರು. ಅನೇಕ ಸಿನಿಮಾಗಳಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದ ಅವರು ರೀಯಲ್ ಲೈಫ್ಲ್ಲೂ ಪ್ರೇಮಿಯಾಗಿದ್ದಾರಾ ಎಂಬ ಸಂಶಯ ಎಲ್ಲರಲ್ಲಿತ್ತು. ಕಾರಣ ಕಾರ್ಯಕ್ರಮಗಳಲ್ಲಿ ಆಗಾಗ ಅವರು ಅಪರಿಚಿತ ಯುವತಿಯ ಜತೆ ಕಾಣಿಸಿಕೊಳ್ಳುತ್ತಿದ್ದುದು. ಆದರೆ ಆಕೆ ಯಾರು ಎಂಬುದನ್ನು ಮಾತ್ರ ಯೋಗಿ ಗುಟ್ಟಾಗಿಟ್ಟಿದ್ದರು. ಮತ್ತೀಗ ಅವರ ಸ್ನೇಹಿತರು ಆಕೆ ಯೋಗಿ ಪ್ರಿಯತಮೆ ಎಂಬುದನ್ನು ಬಾಯ್ಬಿಟ್ಟಿದ್ದಾರೆ.
ನಿಮ್ಮ ಮದುವೆ ಯಾವಾಗ ಎಂಬ ಪ್ರಶ್ನೆಯನ್ನು ಮುಂದಿಟ್ಟಾಗ ಸದಾ ನಾಚಿ ನುಣುಚಿಕೊಳ್ಳುತ್ತಿದ್ದ ಯೋಗಿ ಸಹ ಈ ಬಾರಿ ಬಾಯ್ಬಿಟ್ಟಿದ್ದಾರೆ. ಹೌದು ನಾನು ಪ್ರೀತಿಯಲ್ಲಿ ಬಿದ್ದಿದ್ದೇನೆ. ಐಟಿ ಉದ್ಯೋಗಿಯಾಗಿರುವ ಸಾಹಿತ್ಯ ಎಂಬುವವಳ ಜತೆ ಕಳೆದೆರಡು ವರ್ಷಗಳಿಂದ ಪ್ರೀತಿಯಲ್ಲಿದ್ದೇನೆ. ಕಳೆದ 13 ವರ್ಷಗಳ ಸ್ನೇಹ ನಮ್ಮದು. ನಮ್ಮಿಬ್ಬರ ಪ್ರೀತಿ ವಿಷಯ ಎರಡು ಕುಟುಂಬಗಳಿಗೂ ಗೊತ್ತಿದೆ. ನನ್ನ ತಾಯಿ ಆಕೆಯನ್ನು ಮಗಳಂತೆ ಪ್ರೀತಿಸುತ್ತಾರೆ. ನನಗೂ ಆಕೆಯ ಕುಟುಂಬದ ಬಗ್ಗೆ ಅಪಾರ ಗೌರವವಿದೆ. ಹೆಚ್ಚಿನ ವಿಷಯವನ್ನು ಸಮಯ ಬಂದಾಗ ಹೇಳುತ್ತೇನೆ ಎನ್ನುತ್ತಾರೆ ಯೋಗಿ.
ಸರಿ ನಿಮ್ಮ ಮದುವೆ ಊಟವನ್ನು ಯಾವಾಗ ಹಾಕಿಸುತ್ತೀರಿ ಎಂದರೆ ಅದಕ್ಕೆ ಮತ್ತೊಂದು ವರ್ಷ ಕಾಯಬೇಕು ಎಂದರು ಯೋಗಿ.
ಯೋಗಿ ಅವರಿಗೆ 5 ವರ್ಷ ಹಿರಿಯವನಾದ ಅಣ್ಣನಿದ್ದು ಅವರಿಗೆ ಮುಂದಿನ ತಿಂಗಳು ಮದುವೆ ಎನ್ನಲಾಗುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ