ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್-ರಾಧಿಕಾ ಪಂಡಿತ್ ದಂಪತಿ ತಮ್ಮ ಮುದ್ದು ಮಗನಿಗೆ ‘ಯಥರ್ವ ಯಶ್’ ಎಂದು ನಾಮಕರಣ ಮಾಡಿದ್ದಾರೆ. ಈ ಹೆಸರು ಎಲ್ಲರನ್ನೂ ಸೆಳೆಯುತ್ತಿದೆ.
ಅಂದ ಹಾಗೆ ಈ ಹೆಸರು ಹುಟ್ಟಿಕೊಂಡ ಬಗೆ ಹೇಗೆ ಎಂದು ಯಶ್ ವಿವರಿಸಿದ್ದಾರೆ. ಯಶ್ ಮೊದಲ ಮಗಳ ಹೆಸರು ಐರಾ. ಯಶ್ ಮತ್ತು ರಾಧಿಕಾ ಹೆಸರಿನ ಆರಂಭದ ಎರಡು ಅಕ್ಷರ ವೈ ಮತ್ತು ಆರ್. ಈ ಮೂವರ ಹೆಸರಿನ ಅಕ್ಷರಗಳನ್ನೇ ಹಿಂದೆ ಮುಂದೆ ಮಾಡಿ ‘ಯಥರ್ವ’ ಎಂಬ ಹೆಸರಿಡಲಾಗಿದೆ. ಯಥರ್ವ ಎಂದರೆ ಸಂಪೂರ್ಣ ಎಂದರ್ಥ. ಹೀಗಾಗಿಯೇ ಈ ಹೆಸರಿಡಲಾಗಿದೆ ಎಂದು ಯಶ್ ಹೇಳಿಕೊಂಡಿದ್ದಾರೆ.