ಬೆಂಗಳೂರು: ಅಂತೂ ಬಹುಕಾಲದ ನಿರೀಕ್ಷೆ ನನಸಾಯ್ತು. ತಾಜ್ ವೆಸ್ಟ್ ಎಂಡ್ ಹೋಟೆಲ್ ನ ಉದ್ಯಾನದಲ್ಲಿ ತಮ್ಮ ಬಹುಕಾಲದ ಗೆಳತಿ ರಾಧಿಕಾ ಪಂಡಿತ್ ರನ್ನು ರಾಕಿಂಗ್ ಸ್ಟಾರ್ ಯಶ್ ವಿವಾಹವಾದರು.
ಬೆಳಿಗ್ಗೆ ಗೌರೀ ಪೂಜೆ ಮತ್ತು ವರಪೂಜೆಯೊಂದಿಗೆ ಒಕ್ಕಲಿಗ ಮತ್ತು ಕೊಂಕಣಿ ಸಂಪ್ರದಾಯದಂತೆ ವಿವಾಹ ಕಾರ್ಯಕ್ರಮಗಳು ನಡೆದವು. 11.30 ರ ನಂತರ ನಡೆದ ಅಭಿಜಿನ್ ಮುಹೂರ್ತದಲ್ಲಿ ಯಶ್ ರಾಧಿಕಾಗೆ ಮಾಂಗಲ್ಯ ಧಾರಣೆ ಮಾಡಿದರು. ನಂತರ ಧಾರೆ ಕಾರ್ಯಕ್ರಮಗಳು ನಡೆದವು.
ಈ ಅದ್ಧೂರಿ ವಿವಾಹಕ್ಕೆ ಚಿತ್ರರಂಗ ಮತ್ತು ರಾಜಕೀಯ ಕ್ಷೇತ್ರದ ಗಣ್ಯರು ಆಗಮಿಸಿ ನೂತನ ದಂಪತಿಗೆ ಶುಭ ಕೋರಿದರು. ಯಶ್ ಮತ್ತು ರಾಧಿಕಾ ಅಭಿನಯದ ಮೊದಲ ಧಾರವಾಹಿ ನಂದಗೋಕುಲದ ತಾರೆಯರು, ಎಸ್.ಎಂ.ಕೃಷ್ಣ ದಂಪತಿ, ಕುಮಾರ್ ಬಂಗಾರಪ್ಪ, ಭಾರತಿ ವಿಷ್ಣುವರ್ಧನ್, ನಿರ್ಮಾಪಕ ಕೆ. ಮಂಜು, ಶ್ರೀನಾಥ್, ಪುನೀತ್ ರಾಜ್ ಕುಮಾರ್, ರವಿಚಂದ್ರನ್, ಶಿವರಾಜ್ ಕುಮಾರ್, ಸುದೀಪ್, ಪ್ರಿಯಾಂಕ ಉಪೇಂದ್ರ, ವಿ. ಹರಿಕೃಷ್ಣ, ಅಕುಲ್ ಬಾಲಾಜಿ ಮುಂತಾದ ಚಿತ್ರ ತಾರೆಯರು ಮದುವೆಗೆ ಸಾಕ್ಷಿಯಾದರು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ