ಬೆಂಗಳೂರು: ಇತ್ತೀಚೆಗಷ್ಟೇ ತಮ್ಮ ವಿವಾಹದ ಮೊದಲ ವರ್ಷದ ಆನಿವರ್ಸರಿ ಆಚರಿಸಿಕೊಂಡ ಸ್ಯಾಂಡಲ್ ವುಡ್ ಮೋಸ್ಟ್ ರಾಕಿಂಗ್ ಜೋಡಿ ಯಶ್-ರಾಧಿಕಾ ಪಂಡಿತ್ ವಿದೇಶದಲ್ಲಿ ಸೆಕೆಂಡ್ ಹನಿಮೂನ್ ಮೂಡ್ ನಲ್ಲಿದ್ದಾರೆ.
ಪೂರ್ವ ಆಫ್ರಿಕಾದ ಸೀಶೆಲ್ಸ್ ದ್ವೀಪದಲ್ಲಿ ಆನಿವರ್ಸರಿ ಸಂಭ್ರಮಾಚರಣೆಗಾಗಿ ಪ್ರವಾಸ ಹೋಗಿರುವ ಯಶ್-ರಾಧಿಕಾ ತಮ್ಮ ಖಾಸಗಿ ಸಮಯವನ್ನು ಎಂಜಾಯ್ ಮಾಡುತ್ತಿದ್ದಾರೆ.
ಇಬ್ಬರೂ ತಮ್ಮ ಸಿನಿಮಾ ಕೆಲಸಗಳಿಂದ ಬಿಡುವು ಪಡೆದಿದ್ದು ರಜೆಯ ಮೂಡ್ ನಲ್ಲಿದ್ದಾರೆ. ಇದಾದ ಬಳಿಕ ರಾಧಿಕಾ ಕೂಡಾ ತಮ್ಮ ಹೊಸ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಧಿಕಾ ಮತ್ತು ಯಶ್ ಬೀಚ್ ನಲ್ಲಿ ತೆಗೆದ ಸೆಲ್ಫೀಯನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ