Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಊರ ಕಣ್ಣು, ಮಾರಿ ಕಣ್ಣು ಬೀಳದಿರಲಿ ನಿಮ್ ಜೋಡಿ ಮ್ಯಾಲೆ!

ಊರ ಕಣ್ಣು, ಮಾರಿ ಕಣ್ಣು ಬೀಳದಿರಲಿ ನಿಮ್ ಜೋಡಿ ಮ್ಯಾಲೆ!
ಬೆಂಗಳೂರು , ಶನಿವಾರ, 9 ಮಾರ್ಚ್ 2019 (09:05 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಎಲ್ಲರೂ ಇಷ್ಟಪಡುವ ಕಪಲ್ ಎಂದರೆ ಯಶ್ ಮತ್ತು ರಾಧಿಕಾ ಪಂಡಿತ್. ಈ ಜೋಡಿ ಇದೀಗ ಗೋವಾದಲ್ಲಿ ಹಾಲಿಡೇ ಮೂಡ್ ನಲ್ಲಿದೆ.


ಸದ್ಯಕ್ಕೆ ಯಶ್ ಕೆಜಿಎಫ್ 2 ಚಿತ್ರೀಕರಣಕ್ಕೂ ಮೊದಲು ಬ್ರೇಕ್ ನಲ್ಲಿದ್ದಾರೆ. ರಾಧಿಕಾ ಅಮ್ಮನಾದ ಖುಷಿಯಲ್ಲಿದ್ದಾರೆ. ಜತೆಗೆ ಮೊನ್ನೆಯಷ್ಟೇ ರಾಧಿಕಾ ಬರ್ತ್ ಡೇ. ಈ ಎಲ್ಲಾ ಖುಷಿಯನ್ನು ಒಟ್ಟಾಗಿ ಆಚರಿಸಲು ದಂಪತಿ ಇದೀಗ ಗೋವಾದಲ್ಲಿದ್ದಾರೆ.

ಈ ಬಾರಿ ಬೆಂಗಳೂರಿನಲ್ಲಿ ಬರ್ತ್ ಡೇ ಆಚರಿಸುತ್ತಿಲ್ಲ. ಅದಕ್ಕೆ ಕ್ಷಮೆಯಿರಲಿ ಎಂದು ರಾಧಿಕಾ ಅಭಿಮಾನಿಗಳಿಗೆ ಮನವಿ ಮಾಡಿದ್ದರು. ಹೀಗಾಗಿ ತಮ್ಮ ಕುಟುಂಬ ಸಮೇತ ಗೋವಾದ ಅಜ್ಜಿ ಮನೆಗೆ ಹೋಗಿರುವ ರಾಧಿಕಾ ಅಲ್ಲಿಯೇ ಬರ್ತ್ ಡೇ ಆಚರಿಸಿಕೊಂಡಿದ್ದಾರೆ.

ಬರ್ತ್ ಡೇ ದಿನ ತಮ್ಮ ಪತ್ನಿ ಜತೆ ತೆಗೆಸಿಕೊಂಡ ಸುಂದರ ಫೋಟೋವೊಂದನ್ನು ಯಶ್ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು, ಇದನ್ನು ನೋಡಿ ಅಭಿಮಾನಿಗಳು ಯಾರ ದೃಷ್ಟಿಯೂ ನಿಮಗೆ ಬೀಳದಿರಲಿ ಎಂದು ದೃಷ್ಟಿ ತೆಗೆದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಹಾಟ್ ನಟಿ ಮೋನಾಲೀಸಾ ವಿಡಿಯೋ ನೋಡಿದ್ರೆ ಬೆಚ್ಚಿ ಬೀಳ್ತಿರಿ