ಬೆಂಗಳೂರು: ಕೆಜಿಎಫ್ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಎಬ್ಬಿಸಿರುವ ಹೊಸ ಹವಾ ನೋಡಿ ಭಾರತೀಯ ಚಿತ್ರರಂಗವೇ ಒಮ್ಮೆ ನಮ್ಮತ್ತ ತಿರುಗಿ ನೋಡುವಂತೆ ಮಾಡಿದೆ. ಆದರೆ ಯಾವ ಕಾರಣಕ್ಕೆ ಕೆಜಿಎಫ್ ನೋಡಬೇಕು ಎಂಬುದಕ್ಕೆ ಪ್ರಮುಖವಾಗಿ ಮೂರು ಕಾರಣಗಳನ್ನು ಕೊಡಬಹುದು.
ಫೈಟಿಂಗ್ ಬೋರ್ ಹೊಡೆಸಲ್ಲ
ಸಾಮಾನ್ಯವಾಗಿ ಈ ಚಿತ್ರದ ಟ್ರೇಲರ್ ನೋಡಿದವರು ಇದು ಪಕ್ಕಾ ರಕ್ತ ಸಿಕ್ತ ಸಿನಿಮಾ ಎಂದುಕೊಂಡಿರುತ್ತಾರೆ. ಆದರೆ ಇಲ್ಲಿ ಫೈಟಿಂಗ್ ಇದ್ದರೂ ಅತಿರೇಕವೆನಿಸುವ ದೃಶ್ಯಗಳಿಲ್ಲ. ಹೊಡೆದಾಡುವ ಸನ್ನಿವೇಶಗಳನ್ನು ಆದಷ್ಟು ಸಹಜವಾಗಿ ತೋರಿಸಲಾಗಿದೆ. ಥಿಯೇಟರ್ ನಲ್ಲಿ ಕುಳಿತು ಹೊಡೆದಾಟ ನೋಡಕ್ಕಾಗಲ್ಲ ಎಂದು ಕಣ್ಣು ಮುಚ್ಚಿ ಕೂರಬೇಕಾಗಿಲ್ಲ.
ಯಶ್ ರಾಕಿಂಗ್
ತೆರೆಯಲ್ಲಿ ಯಶ್ ಆವರಿಸಿಕೊಂಡುಬಿಟ್ಟಿದ್ದಾರೆ. ಆದರೆ ಎಲ್ಲೂ ಅವರ ಡೈಲಾಗ್ ಗಳಲ್ಲಿ ಹೀರೋಯಿಸಂ ವಿಜೃಂಭಿಸಿ ಅತಿರೇಕ ಎನಿಸುವಂತಿಲ್ಲ. ಈ ಪಾತ್ರದಲ್ಲಿ ಅವರು ಒಂದಾಗಿ ಹೋಗಿದ್ದಾರೆ. ಅವರ ಮ್ಯಾನರಿಸಂ ನೋಡುವುದೇ ಹಬ್ಬ.
ಸ್ಕ್ರೀನ್ ಪ್ಲೇ
ಸಿನಿಮಾ ಆರಂಭದಿಂದ ಕೊನೆಯವರೆಗೂ ಬೋರ್ ಹೊಡೆಸದೇ ನೋಡಿಸಿಕೊಂಡು ಹೋಗುತ್ತದೆ. ಎಲ್ಲೂ ಇದು ಅನಗತ್ಯ ಸನ್ನಿವೇಶ, ಈ ಸೀನ್ ಬೇಗ ಮುಗಿದು ಹೋಗಲಿ ಎನ್ನುವಂತೆ ಇಲ್ಲ. ಫಸ್ಟ್ ಹಾಫ್ ನ ವೇಗವನ್ನೇ ಸೆಕೆಂಡ್ ಹಾಫ್ ನಲ್ಲೂ ಕಾಯ್ದುಕೊಳ್ಳಲಾಗಿದೆ. ಹಾಗಾಗಿ ಪಕ್ಕಾ ಬೋರ್ ಹೊಡೆಯಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ