ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.
ನಟ ಸುಶಾಂತ್ ಸಿಂಗ್ ನಿಗೂಢ ಸಾವಿನ ಕೇಸ್ ತನಿಖೆಯನ್ನು ಸಿಬಿಐ ನಡೆಸುತ್ತಿದೆ. ಮತ್ತೊಂದೆಡೆ ಇಡಿ, ಎನ್ ಸಿ ಬಿ ತನಿಖೆ ಮುಂದುವರಿಸಿದ್ದು ಹಲವರನ್ನು ಬಂಧನ ಮಾಡಿವೆ.
ಈ ನಡುವೆ ನಟನ ಸಾವಿನ ಬಗ್ಗೆ ನಿರ್ಣಾಯಕ ವರದಿಯನ್ನು ಏಮ್ಸ್ ಸೆಪ್ಟೆಂಬರ್ 22 ರಂದು ಸಿಬಿಐಗೆ ಸಲ್ಲಿಸಲಿದೆ.
ಸುಶಾಂತ್ ಅವರ ಮರಣೋತ್ತರ ವರದಿಯನ್ನು ಮರುಪರಿಶೀಲಿಸುತ್ತಿದ್ದ ಏಮ್ಸ್ ತಂಡವು ಶೀಘ್ರದಲ್ಲೇ ಸಿಬಿಐಗೆ ನಿರ್ಣಾಯಕ ವರದಿಯನ್ನು ಸಲ್ಲಿಸಲಿದೆ.
ವೈದ್ಯರ ಏಮ್ಸ್ ತಂಡವು ಸೆಪ್ಟೆಂಬರ್ 22 ರಂದು ಸಿಬಿಐಗೆ ನಿರ್ಣಾಯಕ ವರದಿಯನ್ನು ಸಲ್ಲಿಸುವ ಸಾಧ್ಯತೆಯಿದೆ. ಈ ವರದಿಯಿಂದ ಸುಶಾಂತ್ ಸಿಂಗ್ ಸತ್ತದ್ದು ಹೇಗೆ ಎಂಬುದರ ಕುರಿತು ತಿಳಿದುಕೊಳ್ಳುವುದಕ್ಕೆ ಸ್ವಲ್ಪ ಸ್ಪಷ್ಟತೆ ಸಿಗುವ ಸಾಧ್ಯತೆ ಇದೆ.