ಉಡುಪಿ : ಸ್ಯಾಂಡಲ್ ವುಡ್ ನಲ್ಲಿ ಮೀಟೂ ಆರೋಪ ಬಾರೀ ಸದ್ದು ಮಾಡುತ್ತಿದ್ದು ಇದೀಗ ಹಿರಿಯ ನಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಜಯಮಾಲಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಉಡುಪಿ ಜಿಲ್ಲೆ ಬೈಂದೂರು ಸಮೀಪದ ನಾಗೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಣ್ಣಿಗಾಗುವ ಚಿತ್ರಹಿಂಸೆ, ದೌರ್ಜನ್ಯಗಳ ವಿರುದ್ಧ ದನಿಯೆತ್ತಲು ಅಭಿಯಾನ ಬಲ ತಂದುಕೊಟ್ಟಿದೆ. ಹೀಗಾಗಿ ದೌರ್ಜನ್ಯಕ್ಕೊಳಗಾದ ಹೆಣ್ಣು ಮುಕ್ತವಾಗಿ ಹೇಳಲು ಮುಂದೆ ಬಂದಾಗ ಆಕೆಗೆ ಬೆಂಬಲ ನೀಡಬೇಕು. ಆದರೆ ಹೆಣ್ಣಿಗೆ ರಕ್ಷಣೆ ಕೊಡುವ ನೆಪದಲ್ಲಿ ಗಂಡನ್ನು ದೂಷಿಸುವುದು ತಪ್ಪು ಎಂದು ತಿಳಿಸಿದ್ದಾರೆ.
ಮೀ ಟೂ’ ಎಂಬ ಹೊಸ ಅಭಿಯಾನದಲ್ಲಿ ಹೆಣ್ಣಿಗೆ ಎಷ್ಟರ ಮಟ್ಟಿಗೆ ನ್ಯಾಯ ಸಿಗುತ್ತದೆ ಎಂಬುದು ಬಹಳ ಮುಖ್ಯ. ಹೀಗಾಗಿ ಈ ಅಭಿಯಾನ ಹೆಣ್ಣನ್ನು ಹರಾಜು ಹಾಕುವ ಅಭಿಯಾನ ಆಗದಿರಲಿ. ರಾಜಕೀಯದಲ್ಲಿ ಸಕ್ರಿಯವಾಗಿದ್ದರಿಂದ ಈಗಿನ ಚಿತ್ರರಂಗದ ಬಗ್ಗೆ ನನಗೆ ಅಷ್ಟೊಂದು ಗೊತ್ತಿಲ್ಲ. ನಾನು ನೋಡಿದಂತೆ ನಟ ಅರ್ಜುನ್ ಸರ್ಜಾ ಸರಳ, ಸಜ್ಜನ ಹುಡುಗ. ಅರ್ಜುನ್ ಸರ್ಜಾ ತಂದೆಯ ಜೊತೆಯೂ ನಾನು ಅಭಿನಯಿಸಿದ್ದೆ’ ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.