ಮುಂಬೈ : ಇತ್ತೀಚೆಗೆ ಸಿನಿಮಾ ರಂಗದಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಬಹಳಷ್ಟು ಚರ್ಚೆ ನಡೆಯುತ್ತಿದ್ದು, ಇದೀಗ ಈ ಬಗ್ಗೆ ಬಾಲಿವುಡ್ ಹಾಟ್ ನಟಿ ರಾಖಿ ಸಾವಂತ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ನಟಿ ರಾಖಿ ಸಾವಂತ್ ಅವರು,’ ಸಿನಿಮಾಗಳಲ್ಲಿ ನಟಿಸುವ 'ಅವಕಾಶ ಪಡೆಯಲು 'ನಿರ್ಮಾಪಕರ ಜೊತೆ ಹೋಗಿರುವ' ಬಹಳಷ್ಟು ಹುಡುಗಿಯರನ್ನು ಚಿತ್ರರಂಗದಲ್ಲಿ ನಾನು ನೋಡಿದ್ದೇನೆ. ಬರೀ ಹುಡುಗಿಯರಷ್ಟೇ ಅಲ್ಲ ಫ್ಯಾಷನ್ ಕ್ಷೇತ್ರದಲ್ಲಿ ಹುಡುಗರೂ ಅವಕಾಶಗಳಿಗಾಗಿ ಕಾಸ್ಟಿಂಗ್ ಕೌಚ್ ಗೆ ಬಲಿಯಾಗಿದ್ದಾರೆ' ಎಂದು ಹೇಳಿದ್ದಾರೆ.
ಹಾಗೇ 'ಚಿತ್ರರಂಗದ ಆರಂಭಿಕ ದಿನಗಳಲ್ಲಿ ನಾನೂ ಕಾಸ್ಟಿಂಗ್ ಕೌಚ್ ಸಮಸ್ಯೆ ಎದುರಿಸಿದ್ದೇನೆ. ಹಾಗೆಂದು ನನ್ನ ಬಳಿ ಎಲ್ಲಾ ನಿರ್ದೇಶಕರು, ನಿರ್ಮಾಪಕರು ಹಾಗೆ ನಡೆದುಕೊಂಡಿದ್ದಾರೆಂದು ನಾನು ಹೇಳುತ್ತಿಲ್ಲ. ನನಗೆ ಗೊತ್ತಿರುವಂತೆ ಇಂಥ ಚರ್ಚೆಗಳು ಕೇವಲ ಆರಂಭಿಕ ಹಂತದವು. ಜೀವನದ ಇತರ ಕ್ಷೇತ್ರಗಳಲ್ಲಿರುವಂತೆ ಸಿನಿಮಾ ರಂಗದಲ್ಲೂ ಲೈಂಗಿಕ ಭ್ರಷ್ಟಾಚಾರವಿದೆ.
ಪ್ರತಿಭೆಯನ್ನೇ ನಂಬಿಕೊಂಡಿದ್ದ ನಾನು ಕಾಸ್ಟಿಂಗ್ ಕೌಚ್ ಅನ್ನು ಸ್ಪಷ್ಟವಾಗಿ ನಿರಾಕರಿಸಿದ್ದೆ. ಚಿತ್ರರಂಗ ಪ್ರವೇಶಿಸುವ ಹೊಸಬರು ತಾಳ್ಮೆಯಿಂದ ಇರಬೇಕು. ಯಶಸ್ಸಿಗಾಗಿ ಅಡ್ಡದಾರಿ ಹಿಡಿಯಬಾರದು' ಎಂದು ಸಲಹೆ ಅವರು ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ