Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಟ ಸುಶಾಂತ್ ಸಿಂಗ್ ಸಹೋದರಿಯೇ ಆ ಔಷಧ ಕೊಟ್ಟಿದ್ದಾಳಾ?

ನಟ ಸುಶಾಂತ್ ಸಿಂಗ್ ಸಹೋದರಿಯೇ ಆ ಔಷಧ ಕೊಟ್ಟಿದ್ದಾಳಾ?
ಮುಂಬೈ , ಮಂಗಳವಾರ, 1 ಸೆಪ್ಟಂಬರ್ 2020 (17:40 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕೇಸ್ ತನಿಖೆ ನಡೆಯುತ್ತಿರುವಾಗಲೇ ನಟಿ ರಿಯಾ ಚಕ್ರವರ್ತಿ ಪರ ವಕೀಲ ಹೊಸ ಆರೋಪ ಮಾಡಿದ್ದಾರೆ.

ವೈದ್ಯರನ್ನು ಸಂಪರ್ಕಿಸದೆ ಸುಶಾಂತ್ ಸಿಂಗ್ ರಜಪೂತ್ ಅವರ ಸಹೋದರಿ ಪ್ರಿಯಾಂಕಾ ಸಿಂಗ್  ಔಷಧಿಗಳನ್ನು ಬದಲಾಯಿಸಿ ಕೊಟ್ಟಿದ್ದಾರೆ ಎಂದು ರಿಯಾ ಚಕ್ರವರ್ತಿ ಪರ ವಕೀಲ ಸತೀಶ್ ಮನೇಶಿಂದೆ ಹೇಳಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ಮತ್ತು ಅವರ ಸಹೋದರಿ ಪ್ರಿಯಾಂಕಾ ಸಿಂಗ್ ಅವರ ನಡುವಿನ ವಾಟ್ಸಾಪ್ ಚಾಟ್‌ಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ನಂತರ, ರಿಯಾ ಚಕ್ರವರ್ತಿ ಪರ ವಕೀಲ ಸತೀಶ್ ಮನೇಶಿಂದೆ ಕೆಲವು ಆಘಾತಕಾರಿ ವಿಷಯ ಬಹಿರಂಗಪಡಿಸಿದ್ದಾರೆ.

ಜೂನ್ 8 ರಂದು ಪ್ರಿಯಾಂಕಾ ತನ್ನ ಸಹೋದರನಿಗೆ ಮೂರು ಆತಂಕ ನಿವಾರಕ ಔಷಧಿಗಳನ್ನು ಶಿಫಾರಸ್ಸು ಮಾಡಿದ್ದಾಳೆ ಎಂದು ಸತೀಶ್ ಆರೋಪಿಸಿದ್ದಾರೆ.

ಸುಳ್ಳು ವೈದ್ಯಕೀಯ ಪ್ರಿಸ್ಕ್ರಿಪ್ಷನ್ ತಯಾರಿಸಿದ್ದಕ್ಕಾಗಿ ಸಹೋದರಿಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯ ಮಾಡಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ನಟ ಸುಶಾಂತ್ ಸಿಂಗ್ ಕೇಸ್ : ನಟಿ ರಿಯಾ ಪೋಷಕರಿಗೆ ಸಿಬಿಐ ಮಾಡಿದ್ದೇನು?