ಚೆನ್ನೈ : ಹಿಟ್ ತಮಿಳು ಚಿತ್ರ ಮನಗರಂ ಹಿಂದಿಗೆ ರಿಮೇಕ್ ಆಗಲಿದ್ದು, ಆ ಮೂಲಕ ತಮಿಳು ನಟ ವಿಜಯ್ ಸೇತುಪತಿ ಅವರು ಮತ್ತೆ ಬಾಲಿವುಡ್ ಗೆ ಪಾದಾರ್ಪಣೆ ಮಾಡಲಿದ್ದಾರಂತೆ.
ಈ ಚಿತ್ರಕ್ಕೆ ಮುಂಬೈಕರ್ ಎಂದು ಶೀರ್ಷಿಕೆ ಇಡಲಾಗಿದ್ದು, ಆ ಮೂಲಕ ಶ್ರೀರಾಮ್ ರಾಘವನ್ ಅವರೊಂದಿಗೆ ವಿಜಯ್ ಸೇತುಪತಿ ಚಿತ್ರ ಮಾಡಲಿದ್ದಾರೆ ಎನ್ನಲಾಗಿದೆ.
ಈಗಾಗಲೇ ವಿಜಯ್ ಸೇತುಪತಿ ಅವರ ಹುಟ್ಟುಹಬ್ಬದಿನದಂದು ಅವರು ಕಿಶೋರ್ ಪಾಂಡುರಂಗ್ ಬೆಲೆಕರ್ ನಿರ್ದೇಶನದ ಬಾಲಿವುಡ್ ನ ಚಿತ್ರವೊಂದನ್ನು ಮಾಡಲಿದ್ದಾರೆಂದು ಅಧಿಕೃತವಾಗಿ ಘೋಷಿಸಲಾಗಿತ್ತು. ಇದು ಹಿಂದಿ, ಮರಾಠಿ, ತಮಿಳು, ತೆಲುಗು, ಮಲಯಾಳಂ ಮತ್ತುಕನ್ನಡ ಸೇರಿದಂತೆ ಆರು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ