ಚೆನ್ನೈ : ನಟ ವೈಷ್ಣವ್ ತೇಜ್ ಹಾಗೂ ನಟಿ ಕೃತಿ ಶೆಟ್ಟಿ ಅಭಿನಯದ ಉಪ್ಪೇನಾ ಚಿತ್ರ ಇತ್ತೀಚೆಗೆ ಬಿಡುಗಡೆಯಾಗಿ ಭಾರೀ ಯಶಸ್ಸಿನತ್ತ ಸಾಗುತ್ತಿದೆ. ಹಾಗಾಗಿ ಈ ಚಿತ್ರವನ್ನು ತಮಿಳಿಗೆ ರಿಮೇಕ್ ಮಾಡಲು ನಿರ್ಮಾಪಕರು ಮುಂದಾಗಿದ್ದಾರೆ ಎನ್ನಲಾಗಿದೆ.
ಮಾಹಿತಿ ಪ್ರಕಾರ ಕೆಲವು ನಿರ್ಮಾಪಕರು ಈ ಚಿತ್ರವನ್ನು ಡಬ್ಬಿಂಗ್ ಮಾಡಲು ಯೋಚಿಸುತ್ತಿದ್ದಾರೆ. ಆದರೆ ನಟ ವಿಜಯ್ ಸೇತುಪತಿ ಅವರು ಅದಕ್ಕೆ ತಡೆಯೊಡ್ಡಿದ್ದು, ತಮಿಳಿಗೆ ರಿಮೇಕ್ ಮಾಡಲು ಸೂಚಿಸಿದ್ದಾರೆ ಎನ್ನಲಾಗಿದೆ. ಹಾಗೇ ವಿಜಯ್ ಸೇತುಪತಿ ಅವರು ರಿಮೇಕ್ ಹಕ್ಕುಗಳನ್ನು ಖರೀದಿಸಿ ಖ್ಯಾತ ನಟ ವಿಜಯ್ ಅವರ ಪುತ್ರ ಜೇಸನ್ ಸಂಜಯ್ ಅವರೊಂದಿಗೆ ಚಿತ್ರ ಮಾಡಲು ನಿರ್ಧರಿಸಿದ್ದಾರಂತೆ. ಈ ಕಥೆ ವಿಜಯ್ ಇಷ್ಟವಾಗಿದ್ದು, ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.