ಹೈದರಾಬಾದ್ : ಗ್ರಾಮೀಣ ಜೀವನಕ್ಕೆ ಸಂಬಂಧಪಟ್ಟ ನಟ ಶರ್ವಾನಂದ್ ಅವರ ಶ್ರೀಕರಂ ಚಿತ್ರ ಇತ್ತೀಚೆಗೆ ಬಿಡುಗಡೆಯಾಗಿ ಸಕರಾತ್ಮಕ ಪ್ರತಿಕ್ರಿಯೆ ಪಡೆದುಕೊಂಡಿದೆ. ಇದೀಗ ಈ ಚಿತ್ರವನ್ನು ನೋಡಿದ ಭಾರತದ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಶ್ಲಾಘಿಸಿದ್ದಾರೆ.
ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಚಿತ್ರವನ್ನು ವಿಶೇಷ ಪ್ರದರ್ಶನದಲ್ಲಿ ವೀಕ್ಷಿಸಿದ್ದರು. ಮತ್ತು ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಶ್ರೀಕರಂ ಚಿತ್ರ ಯುವಕರಿಗೆ ತಮ್ಮ ಹಳ್ಳಿಗಳಿಗೆ ಮರಳಲು ಪ್ರೇರಣೆ ನೀಡುತ್ತದೆ. ಕಳೆದುಹೋದ ಕೃಷಿ ವೈಭವವನ್ನು ಮರಳಿ ತರುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದ್ದಾರೆ.