Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪತ್ನಿ ಪ್ರಿಯಾಂಕ ಬರ್ತ್ ಡೇಗೆ ಉಪೇಂದ್ರ ಕೊಟ್ಟ ಆ ದುಬಾರಿ ಗಿಫ್ಟ್ ಏನು ಗೊತ್ತಾ?

ಪತ್ನಿ ಪ್ರಿಯಾಂಕ ಬರ್ತ್ ಡೇಗೆ ಉಪೇಂದ್ರ ಕೊಟ್ಟ ಆ ದುಬಾರಿ ಗಿಫ್ಟ್ ಏನು ಗೊತ್ತಾ?
ಬೆಂಗಳೂರು , ಗುರುವಾರ, 14 ನವೆಂಬರ್ 2019 (09:24 IST)
ಬೆಂಗಳೂರು: ಸ್ಟಾರ್ ನಟರ ಬರ್ತ್ ಡೇ ಎಂದರೆ ಸುಮ್ನೇನಾ? ಅದರಲ್ಲೂ ರಿಯಲ್ ಸ್ಟಾರ್ ಉಪೇಂದ್ರ ಪತ್ನಿ, ನಟಿ ಪ್ರಿಯಾಂಕ ಉಪೇಂದ್ರ ತಮ್ಮದೇ ಆದ ಅಭಿಮಾನಿ ವರ್ಗದವರನ್ನು ಹೊಂದಿದ್ದಾರೆ.
 

ಇಂತಿಪ್ಪ ಪ್ರಿಯಾಂಕ ನಿನ್ನೆಯಷ್ಟೇ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡಿದ್ದರು. ಅವರ ಹುಟ್ಟುಹಬ್ಬ ನಿಮಿತ್ತ ಪತಿ ಉಪೇಂದ್ರ ದುಬಾರಿ ಉಡುಗೊರೆಯೊಂದನ್ನು ಕೊಟ್ಟಿದ್ದಾರಂತೆ. ಅದೇನೆಂದು ಸ್ವತಃ ಪ್ರಿಯಾಂಕ ಬಹಿರಂಗಪಡಿಸಿದ್ದಾರೆ.

ಈ ಬಾರಿ ಬರ್ತ್ ಡೇ ದಿನ ಉಪ್ಪಿ ನನಗೆ ಒಂದು ಪ್ರಾಮಿಸ್ ಮಾಡಿದ್ದಾರೆ. ಇನ್ಮೇಲೆ ಪ್ರತಿದಿನ ಫೋನ್,  ಪ್ರಜಾಕೀಯ, ಸಿನಿಮಾ ರಗಳೆಗಳನ್ನೆಲ್ಲಾ ಬದಿಗಿರಿಸಿ ಎರಡು ಗಂಟೆ ನನಗಾಗಿ ಸಮಯ ಕೊಡುವುದಾಗಿ ಉಪ್ಪಿ ಪ್ರಾಮಿಸ್ ಮಾಡಿದ್ದಾರೆ. ಇದುವೇ ನನಗೆ ದೊಡ್ಡ ಗಿಫ್ಟ್ ಎಂದು ಪ್ರಿಯಾಂಕ ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಿಫರೆಂಟ್ ಆಗಿ ಬಿಡುಗಡೆಯಾಗಲಿದೆ ಬ್ರಹ್ಮಚಾರಿ ಹಾಡು