ಹೈದರಾಬಾದ್ : ಟಾಲಿವುಡ್ ಫ್ರಿನ್ಸ್ ಮಹೇಶ್ ಬಾಬು ನಾಯಕನಟನಾಗಿ ಅಭಿನಯಿಸಿದ ಮೊದಲ ಚಿತ್ರಕ್ಕೆ 21 ವರ್ಷ ತುಂಬಿದ ಹಿನ್ನಲೆಯಲ್ಲಿ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಖುಷಿ ಹಂಚಿಕೊಂಡಿದ್ದಾರೆ.
ಹೌದು. ಮಹೇಶ್ ಬಾಬು ನಾಯಕನಟನಾಗಿ ಅಭಿನಯಿಸಿದ ಮೊದಲ ಚಿತ್ರ ‘ರಾಜಕುಮಾರುಡು’. ಈ ಚಿತ್ರದಲ್ಲಿ ಬಾಲಿವುಡ್ ನಟಿ ಪ್ರೀತಿ ಜಿಂಟಾ ನಾಯಕಿಯಾಗಿ ನಟಿಸಿದ್ದಾರೆ. ಈ ಸಿನಿಮಾಕ್ಕೆ ಜುಲೈ 30ರಂದು 21 ವರ್ಷ ತುಂಬಿದೆ.
ಈ ಹಿನ್ನಲೆಯಲ್ಲಿ ತಮಗೆ ನಾಯಕನಾಗಿ ನಟಿಸುವ ಅವಕಾಶ ನೀಡಿದ ಚಿತ್ರದ ನಿರ್ದೇಶಕರಾಘವೇಂದ್ರ ರಾವ್ ಹಾಗೂ ಚಿತ್ರತಂಡಕ್ಕೆ ಅವರು ಟ್ವೀಟರ್ ನಲ್ಲಿ ಧನ್ಯವಾದ ತಿಳಿಸಿದ್ದಾರೆ.