ಬೆಂಗಳೂರು : ಸ್ಯಾಂಡಲ್ ವುಡ್ ನ ಹಿರಿಯ ನಟಿ ಲೀಲಾವತಿ ಅವರ ಪುತ್ರ, ನಟ ವಿನೋದ್ ರಾಜ್ ಅವರ ಒಂದು ಲಕ್ಷ ರೂಪಾಯಿಯನ್ನು ಕಳ್ಳರು ದೋಚಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.
ಈ ಘಟನೆ ಶುಕ್ರವಾರ ನೆಲಮಂಗಲದ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ನಟ ವಿನೋದ್ ರಾಜ್ ಅವರು ಬ್ಯಾಂಕ್ ನಿಂದ ಒಂದು ಲಕ್ಷ ರೂಪಾಯಿ ಡ್ರಾ ಮಾಡಿ ಕಾರನ್ನು ಸಿಎನ್ ಆರ್ ಬಟ್ಟೆ ಮಳಿಗೆ ಬಳಿ ನಿಲ್ಲಿಸಿದ್ದಾರೆ.
ಆ ವೇಳೆ ಅಲ್ಲಿಗೆ ಬಂದ ಇಬ್ಬರು ಪರಿಚಯಸ್ಥರಂತೆ ಮಾತನಾಡಿ, ಟಯರ್ ಪಂಕ್ಚರ್ ಆಗಿದೆ ಎಂದು ಹೇಳಿ ಬದಲಾಯಿಸಲು ನೆರವಾಗಲು ಬಂದು ಕಾರಿನಲ್ಲಿದ್ದ ಒಂದು ಲಕ್ಷ ರೂ. ದೋಚಿ ಪರಾರಿಯಾಗಿದ್ದಾರೆ ಎಂದು ವಿನೋದ್ ರಾಜ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ