ಹೈದರಾಬಾದ್ : ತೆಲುಗಿನ ಖ್ಯಾತ ನಿರ್ದೇಶಕ ರಾಜಮೌಳಿ ಮತ್ತು ಅವರ ಕುಟುಂಬ ಕೊನೆಗೂ ಕೊರೊನಾ ವಿರುದ್ಧ ಹೋರಾಡಿ ಗೆಲುವು ಸಾಧಿಸಿದ್ದಾರೆ.
ಜುಲೈ 29ರಂದು ರಾಜಮೌಳಿ ಮತ್ತು ಅವರ ಕುಟುಂಬದವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಆದಕಾರಣ ಎಲ್ಲರನ್ನೂ ಮನೆಯಲ್ಲಿಯೇ ಪ್ರತ್ಯೇಕವಾಗಿ ಕ್ವಾರಂಟೈನ್ ನಲ್ಲಿರಿಸಲಾಗಿತ್ತು.
ಇದೀಗ 2 ವಾರಗಳ ಕ್ವಾರಂಟೈನ್ ಅವಧಿ ಮುಗಿದಿದ್ದು, ಯಾವುದೇ ರೋಗ ಲಕ್ಷಣಗಳಿಲ್ಲ. ವರದಿ ಕೂಡ ನೆಗೆಟಿವ್ ಬಂದಿದೆ ಎಂದು ರಾಜಮೌಳಿ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಹಾಗೇ ಪ್ಲಾಸ್ಮಾ ದಾನ ಮಾಡಲು ಕಾತುರದಿಂದ ಕಾಯುತ್ತಿರುವ ರಾಜಮವಳಿ ಪ್ಲಾಸ್ಮಾ ದಾನ ಮಾಡಲು ಇನ್ನೂ 3 ವಾರಗಳು ಕಾಯಬೇಕು ಎಂದು ತಿಳಿಸಿದ್ದಾರೆ.