ಬೆಂಗಳೂರು : ಸ್ಯಾಂಡಲ್ ವುಡ್ ನ ಸ್ಟಾರ್ ನಟರಾದ ಶಿವರಾಜ್‌ಕುಮಾರ್ ಹಾಗೂ ಸುದೀಪ್ ಅಭಿನಯದ ಬಹುನಿರೀಕ್ಷೆಯ ‘ದಿ ವಿಲನ್’ ಚಿತ್ರದ ಹಾಡೋಂದರ ಕುರಿತು ಈ ಹಿಂದೆ ಬಾರೀ ವಿರೋಧ ವ್ಯಕ್ತವಾಗಿತ್ತು. ಆದರೆ ಅದೇರೀತಿ ಇದೀಗ ಈ ಚಿತ್ರದ ಮತ್ತೊಂದು ಸಾಂಗ್ ವಿವಾದಕ್ಕೀಡಾಗಿದೆ.
ಹೌದು. ‘ದಿ ವಿಲನ್’ ಚಿತ್ರದ ಹಾಡಿನಲ್ಲಿ ‘ಗರುಡ್ನಂಗೆ ಇದ್ದೋನ್ ನೋಡ್ಲಾ ಕುರುಡ್ನಂಗ್ ಆಗೋದ್ನೋ’ ಎಂಬ ಸಾಲಿದೆ. ಇದು ಅಂಧ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ.
ಅಂಧ ಸಮುದಾಯದ ಪ್ರತಿನಿಧಿ ಎಂ. ವೀರೇಶ್, ಈ ಹಾಡಿನಲ್ಲಿ ಬಳಸಿರುವ ಕುರುಡ ಎಂಬ ಪದವನ್ನು ತೆಗೆದು ಹಾಕಬೇಕು. ಚಲನಚಿತ್ರಗಳಲ್ಲಿ ಅಂಧತ್ವನ್ನು ಹೀನಾಯವಾಗಿ ಬಿಂಬಿಸುವುದನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿದ್ದಾರೆ. ಒಂದು ವೇಳೆ ಕುರುಡ ಪದ ತೆಗೆಯದಿದ್ದರೆ ಚಿತ್ರ ಬಿಡುಗಡೆಯಂದು (ಅ.18) ನರ್ತಕಿ ಚಿತ್ರಮಂದಿರದ ಮುಂದೆ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.