ಪ್ರಖ್ಯಾತ ಸಿನಿಮಾ ಮತ್ತು ಧಾರಾವಾಹಿ ನಟಿಯೊಬ್ಬಳಿಗೆ ತಂದೆಯೇ ಆ ಬೇಡಿಕೆ ಇಟ್ಟ ಅಮಾನವೀಯ ಘಟನೆ ನಡೆದಿದೆ.
ಹಿಂದಿಯಲ್ಲಿ ಪ್ರಸಾರವಾಗುತ್ತಿರುವ ಕುಂಕುಂ ಭಾಗ್ಯ ಧಾರವಾಹಿಯ ಯುವನಟಿ ಹಾಗೂ ಸಿನಿಮಾನಟಿ ನಟಿ ತೃಪ್ತಿ ಶಂಖ್ದಾರ್ ತನ್ನ ತಂದೆಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾಳೆ.
ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಾಕಿರುವ ನಟಿ, ತನ್ನ ತಂದೆ ತೋರಿಸಿದ ಹುಡುಗನ ಜೊತೆ ಮದುವೆಯಾಗಬೇಕು. ಇಲ್ಲದಿದ್ದರೆ ಕೊಲ್ಲುವುದಾಗಿ ಬೆದರಿಸುತ್ತಿದ್ದು, ತನಗೆ ರಕ್ಷಣೆ ಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದಾಳೆ.
ಇನ್ನು, ಮುಂಬೈಗೆ ಬರುವಾಗ ತಂದೆ ಕೊಡುತ್ತಿದ್ದ ಹಣವನ್ನು ವಾಪಸ್ ಕೊಡುವಂತೆ ಬೇಡಿಕೆ ಇಡುತ್ತಿದ್ದಾರೆ ಎಂದು 19 ವರ್ಷದ ಯುವ ನಟಿ ತೃಪ್ತಿ ಆರೋಪ ಮಾಡಿದ್ದಾಳೆ.