ಹೈದರಾಬಾದ್ : ಇತ್ತೀಚಿನ ದಿನಗಳಲ್ಲಿ ತೆಲುಗು ಚಿತ್ರೋದ್ಯಮಯದಲ್ಲಿ ಮಲ್ಟಿ ಸ್ಟಾರ್ ಗಳ ಚಿತ್ರಗಳು ಯಶಸ್ಸು ಕಾಣುತ್ತಿದೆ. ಸ್ಟಾರ್ ಹೀರೋಗಳು ಕೂಡ ಒಟ್ಟಾಗಿ ನಟಿಸಲು ಮುಂದೆ ಬರುತ್ತಿದ್ದಾರೆ.
ಅದರಂತೆ ಇದೀಗ ತೆಲುಗು ಸ್ಟಾರ್ ನಟರಾದ ಮಹೇಶ್ ಬಾಬು ಮತ್ತು ಪವನ್ ಕಲ್ಯಾಣ್ ಅವರು ಒಂದೇ ಚಿತ್ರದಲ್ಲಿ ನಟಿಸಲು ಹೊರಟಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಪವನ್ ಕಲ್ಯಾಣ್ ಅವರು ಮಹೇಶ್ ಬಾಬು ಅವರ ಇತ್ತೀಚಿನ ಚಿತ್ರ ಸರ್ಕಾರು ವಾರಿ ಪಾಟಾ ದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಬ್ಯಾಂಕುಗಳಿಂದ ಸಾಲ ತೆಗೆದುಕೊಂಡು ವಿದೇಶಕ್ಕೆ ಪಲಯಾನ ಮಾಡುವ ಜನರನ್ನು ಗುರಿಯಾಗಿಸಿಕೊಂಡು ಬ್ಯಾಂಕ್ ಹಗರಣಗಳ ಹಿನ್ನಲೆಯಲ್ಲಿ ಈ ಚಿತ್ರವನ್ನು ಸಿದ್ದಪಡಿಸಲಾಗಿದೆ. ಇದರಲ್ಲಿ ಪವನ್ ಕಲ್ಯಾಣ್ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂಬ ವದಂತಿ ಕೇಳಿಬರುತ್ತಿದೆ ಎನ್ನಲಾಗಿದೆ.