ಚೆನ್ನೈ : ಆರ್ಥಿಕ ಸಮಸ್ಯೆ ಹಾಗೂ ಕುಟುಂಬ ಕಲಹಕ್ಕೆ ನೊಂದು ತಮಿಳಿನ ಮರಿನಾ ಸಿನಿಮಾ ನಟ ತೆನ್ನರಸು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಟ ತೆನ್ನರಸುಗೆ ಮದುವೆಯಾಗಿದ್ದು, 2 ವರ್ಷದ ಮಗುವಿದೆ. ಕೊರೊನಾ ಲಾಕ್ ಡೌನ್ ನಿಂದಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ನಟ ಆಗಾಗ ಕುಟುಂಬದವರ ಜೊತೆ ಜಗಳವಾಡುತ್ತಿದ್ದರು ಎನ್ನಲಾಗಿದೆ. ಆದರೆ ಈ ಸಮಸ್ಯೆಗಳಿಂದ ಬೇಸತ್ತ ನಟ ಮಂಗಳವಾರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇವರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೇ ನಟ ಶಿವಕಾರ್ತಿಕೇಯನ್ ಹಾಗೂ ಒಲಿವಿಯಾ ನಟಿಸಿದ್ದ ಮರಿನಾ ಸಿನಿಮಾದಲ್ಲಿ ನಟನ ಆಪ್ತ ಗೆಳೆಯನಾಗಿ ನಟಿಸಿ ಖ್ಯಾತಿ ಗಳಿಸಿದ್ದರು.