ಚೆನ್ನೈ : ನೀಟ್-ಜೆಇಇ ಪರೀಕ್ಷೆಗಳನ್ನು ಖಂಡಿಸಿ ತಮಿಳು ನಟ ಸೂರ್ಯ ಟ್ವೀಟ್ ಮಾಡಿ ಇದೀಗ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ ಎನ್ನಲಾಗಿದೆ.
ನೀಟ್-ಜೆಇಇ ಪರೀಕ್ಷೆಗಳನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಆದರೆ ಈ ಪರೀಕ್ಷೆಗೆ ಹೆದರಿ ಕೆಲವು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಹಿನ್ನಲೆಯಲ್ಲಿ ಈ ಪರೀಕ್ಷೆಗಳನ್ನು ಖಂಡಿಸಿದ ನಟ ಸೂರ್ಯ, “ನೀಟ್-ಜೆಇಇ ಪರೀಕ್ಷೆ ಮನುನೀತಿ ಪರೀಕ್ಷೆಗಳಿದ್ದಂತೆ. ಇವು ವಿದ್ಯಾರ್ಥಿಗಳ ಜೀವ ಹಿಂಡುತ್ತಿದೆ ಎಂದು ಹೇಳಿದ್ದಾರೆ. ಹಾಗೇ ನೀಟ್ ವಿರುದ್ಧ ಧ್ವನಿ ಎತ್ತಬೇಕು ಎಂದು ಕರೆ ನೀಡಿದ್ದಾರೆ.
ಹಾಗೇ ದೇಶದ ನ್ಯಾಯಾಲಯಗಳಲ್ಲಿಯೇ ಸೋಂಕಿನ ಭಯದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸುತ್ತಿರುವಾಗ, ಅದೇ ನ್ಯಾಯಾಲಯವು ನಿರ್ಭಯವಾಗಿ ಮತ್ತು ಕಡ್ಡಾಯವಾಗಿ ಪರೀಕ್ಷೆಗಳನ್ನು ಬರೆಯುವಂತೆ ಆದೇಶಿಸಿರುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಎಸ್.ಎಂ.ಸುಬ್ರಮಣ್ಯಂ ಅವರು ಮುಖ್ಯ ನ್ಯಾಯಮೂರ್ತಿ ಅಮರೇಶ್ವರ ಪ್ರತಾಪ್ ಸಾಹಿಗೆ ನಟ ಸೂರ್ಯ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವಂತೆ ಪತ್ರ ಬರೆದಿದ್ದಾರೆ.