ಹೈದರಾಬಾದ್ : ಏಪ್ರಿಲ್ 2ರಂದು ತೆರೆಗೆ ಬರಲಿದೆ ಎಂದು ಕಾತುರದಿಂದ ಕಾಯುತ್ತಿದ್ದ ಗೋಪಿಚಂದ್ ಮತ್ತು ತಮನ್ನಾ ಅಭಿನಯದ ಸೀಟಿಮಾರ್ ಚಿತ್ರ ಅನಿರ್ದಿಷ್ಟಾವಧಿಗೆ ಮೂಂದೂಡಲಾಗಿದೆ.
ಹೌದು. ಸಂಪತ್ ನಂದಿ ನಿರ್ದೇಶನದ ಈ ಚಿತ್ರವನ್ನು ಏಪ್ರಿಲ್ 2ರಂದು ಬಿಡುಗಡೆ ಮಾಡವುದಾಗಿ ನಿರ್ಮಾಪಕರು ತಿಳಿಸಿದ್ದರು. ಆದರೆ ನಿರ್ಮಾಣದ ನಂತರ ಕೆಲಸಗಳನ್ನು ಪೂರ್ಣಗೊಳಿಸಲು ಕೆಲವು ಅನಿರೀಕ್ಷಿತ ವಿಳಂಬದಿಂದಾಗಿ ಮೂಂದೂಡಿಕೆ ಮಾಡಲಾಗಿದೆ ಹಾಗೂ ಹೊಸ ದಿನಾಂಕವನ್ನು ಶೀಘ್ರದಲ್ಲಿಯೇ ಪ್ರಕಟಿಸುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ ಎನ್ನಲಾಗಿದೆ.