ಬೆಂಗಳೂರು: ಎಲ್ಲಿದ್ದೆ ಇಲ್ಲಿ ತನಕ ಸಿನಿಮಾ ಯಶಸ್ಸಿನಿಂದ ಹಿಗ್ಗಿರುವ ನಟ ಸೃಜನ್ ಲೋಕೇಶ್ ಈಗ ಕಿರುತೆರೆ ಬಿಟ್ಟು ಸಂಪೂರ್ಣವಾಗಿ ಸಿನಿಮಾದಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದ್ದಾರೆ.
ಎಲ್ಲಿದ್ದೆ ಇಲ್ಲಿ ತನಕ ಸಿನಿಮಾವನ್ನು ನಿರ್ದೇಶಿಸಿದ್ದ ತೇಜಸ್ವಿ ಜತೆಗೆ ಮತ್ತೊಂದು ಸಿನಿಮಾ ಮಾಡಲು ಸೃಜನ್ ರೆಡಿಯಾಗಿದ್ದಾರೆ. ಈ ಸಿನಿಮಾವನ್ನೂ ತಮ್ಮ ಹೋಂ ಬ್ಯಾನರ್ ಲೋಕೇಶ್ ಪ್ರೊಡಕ್ಷನ್ ನಲ್ಲೇ ನಿರ್ಮಿಸಲು ನಿರ್ಧರಿಸಿದ್ದಾರಂತೆ.
ಈ ಬಗ್ಗೆ ಈಗಾಗಲೇ ನಿರ್ದೇಶಕರ ಜತೆ ಮಾತುಕತೆ ನಡೆಸಿದ್ದು, ಸದ್ಯದಲ್ಲೇ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಿದ್ದಾರೆ. ಅಂತೂ ತಡವಾಗಿಯಾದರೂ ಸೃಜನ್ ಸ್ಯಾಂಡಲ್ ವುಡ್ ನಲ್ಲಿ ಒಂದು ನೆಲೆ ಕಂಡುಕೊಳ್ಳುವ ಹಂತದಲ್ಲಿದ್ದಾರೆ.