ಬೆಂಗಳೂರು: ರಿಯಾಲಿಟಿ ಶೋಗಳ ನಿರೂಪಕರಾಗಿ, ಸಿನಿಮಾಗಳ ಮೂಲಕ ಜನರ ಗಮನ ಸೆಳೆದಿರುವ ನಟ ಸೃಜನ್ ಲೋಕೇಶ್ ಈಗ ನಿರ್ದೇಶನಕ್ಕಿಳಿಯುತ್ತಿದ್ದಾರೆ.
ಜಿಎಸ್ ಟಿ ಎನ್ನುವ ಸಿನಿಮಾವನ್ನು ಸೃಜನ್ ನಿರ್ದೇಶಿಸಲಿದ್ದಾರೆ. ಈ ಸಿನಿಮಾವನ್ನು ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್ ನಿರ್ಮಾಣ ಮಾಡಲಿದೆ.
ವಿಶೇಷವೆಂದರೆ ಈ ಸಿನಿಮಾದಲ್ಲಿ ಸೃಜನ್ ಪುತ್ರ ಸುಕೃತ್ ಕೂಡಾ ಅಭಿನಯಿಸಲಿದ್ದಾರೆ. ಆ ಮೂಲಕ ಲೋಕೇಶ್ ಕುಟುಂಬದ ಮತ್ತೊಂದು ಕುಡಿ ಚಿತ್ರರಂಗಕ್ಕೆ ಕಾಲಿಟ್ಟಂತಾಗಲಿದೆ. ಈಗಾಗಲೇ ಮುಹೂರ್ತ ಕಾರ್ಯಕ್ರಮ ನೆರವೇರಿದೆ.