ಬೆಂಗಳೂರು: ರೋರಿಂಗ್ ಸ್ಟಾರ್ ಶ್ರೀಮುರಳಿ ತಮ್ಮ ಕುಟುಂಬದವರ ಜತೆ ಎಷ್ಟೊಂದು ಫ್ರೆಂಡ್ಲಿಯಾಗಿರುತ್ತಾರೆ ಎಂದು ಅವರ ಸಾಮಾಜಿಕ ಜಾಲತಾಣ ತೆರೆದರೆ ಗೊತ್ತಾಗುತ್ತದೆ.
ಏನೇ ವಿಶೇಷವಿರಲಿ, ಇಲ್ಲದಿರಲಿ ಶ್ರೀಮುರಳಿ ತಮ್ಮ ಅಮ್ಮ, ಮಕ್ಕಳ ಜತೆಗಿನ ಸುಂದರ ಕ್ಷಣಗಳು, ಖಾಸಗಿ ಕ್ಷಣಗಳನ್ನೂ ಬಿಡದೇ ವಿಡಿಯೋ ಮಾಡಿ ಕಾಲೆಳೆಯುತ್ತಿರುತ್ತಾರೆ. ಇದೀಗ ಮುರಳಿ ತಮ್ಮ ಮುತ್ತಿಕ್ಕುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗಣೇಶ ಹಬ್ಬಕ್ಕೆ ಭರ್ಜರಿಯಾಗಿ ರೆಡಿಯಾದ ಪತ್ನಿಯನ್ನು ಸುಂದರವಾಗಿ ಕಾಣುತ್ತಿದ್ದಾಳೆಂದು ಎಲ್ಲರೆದುರೇ ಮುದ್ದಿಸಿದ್ದೇ ಮುದ್ದಿಸಿದ್ದು, ಈ ದೃಶ್ಯ ಈಗ ವೈರಲ್ ಆಗಿದೆ.