Select Your Language

Notifications

webdunia
webdunia
webdunia
webdunia

ಬೈ ಟು ಲವ್ ಜೊತೆಗೆ ಖುಷಿ ಸುದ್ದಿ ಹಂಚಿಕೊಂಡ ಶ್ರೀಲೀಲಾ

ಬೈ ಟು ಲವ್ ಜೊತೆಗೆ ಖುಷಿ ಸುದ್ದಿ ಹಂಚಿಕೊಂಡ ಶ್ರೀಲೀಲಾ
ಬೆಂಗಳೂರು , ಶನಿವಾರ, 5 ಫೆಬ್ರವರಿ 2022 (08:41 IST)
ಬೆಂಗಳೂರು: ನಟಿ ಶ್ರೀಲೀಲಾ ಈಗ ಬೈ ಟು ಲವ್ ಸಿನಿಮಾ ಬಿಡುಗಡೆಯಾಗುತ್ತಿರುವ ಖುಷಿಯಲ್ಲಿದ್ದಾರೆ. ಇದರ ಜೊತೆಯಲ್ಲೇ ಅವರು ಖುಷಿ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ.

ಶ್ರೀಲೀಲಾ-ಧನ್ವೀರ್ ಗೌಡ ಅಭಿನಯದ ಬೈ ಟು ಲವ್ ಸಿನಿಮಾದ ಟೈಟಲ್ ಹಾಡೊಂದು ಮೊನ್ನೆ ಬಿಡುಗಡೆಯಾಗಿದ್ದು, ಭರ್ಜರಿ ವ್ಯೂ ಪಡೆದುಕೊಂಡಿದೆ. ಈ ಯುವ ಸೆನ್ಸೇಷನಲ್ ಜೋಡಿಯ ಸಿನಿಮಾ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲವಿರುವುದಂತೂ ಸುಳ್ಳಲ್ಲ.

ಇದರ ಜೊತೆಗೇ ಶ್ರೀಲೀಲಾ ಖುಷಿ ಸಮಾಚಾರವೊಂದನ್ನು ನೀಡಿದ್ದಾರೆ. ಈ ಸಿನಿಮಾ ಮೂಲಕ ಶ್ರೀಲೀಲಾ ಇದೇ ಮೊದಲ ಬಾರಿಗೆ ಡಬ್ಬಿಂಗ್ ಮಾಡಿದ್ದಾರೆ. ಇದುವರೆಗೆ ತಮ್ಮ ಸಿನಿಮಾಗೆ ಬೇರೆಯವರಿಂದ ಡಬ್ ಮಾಡಿಸಲಾಗುತ್ತಿತ್ತು. ಹೀಗಾಗಿ ತಮಗೆ ಅದು ತೃಪ್ತಿ ಕೊಡುತ್ತಿರಲಿಲ್ಲ. ಆದರೆ ಈಗ ನಿರ್ದೇಶಕರಿಗೆ ದಂಬಾಲು ಬಿದ್ದು ನಾನೇ ಡಬ್ ಮಾಡಿದ್ದೇನೆ. ಖುಷಿಯಾಗುತ್ತಿದೆ ಎಂದು ಶ್ರೀಲೀಲಾ ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಥಿಯೇಟರ್ ನಲ್ಲಿ ಹೌಸ್ ಫುಲ್ ಪ್ರದರ್ಶನಕ್ಕೆ ಒಪ್ಪಿದ ಸರ್ಕಾರ