ಹೈದರಾಬಾದ್ : ನಟಿ ನಿರ್ದೇಶಕ ರಾಜಂಗಂ ಅವರು ಈ ಹಿಂದೆ ಚಿತ್ರರಂಗದ ಕಾಸ್ಟಿಂಗ್ ಕೌಚ್ ಬಗ್ಗೆ ಧ್ವನಿ ಎತ್ತಿದ್ದ ನಟಿ ಶ್ರೀರೆಡ್ಡಿ ಅವರ ರೆಡ್ಡಿ ಡೈರಿ ಶೀರ್ಷಿಕೆಯ ಜೀವನಚರಿತ್ರೆಯನ್ನು ನಿರ್ಮಿಸುತ್ತಿದ್ದಾರೆ.
ಈ ಚಿತ್ರ ನಟನಾ ಅವಕಾಶಗಳಿಗೆ ಪ್ರತಿಯಾಗಿ ಲೈಂಗಿಕ ಕಿರುಕುಳ ಸ್ವೀಕರಿಸಲು ಒತ್ತಾಯಿಸುವ ಮೂಲಕ ಉದ್ಯಮದ ಗಣ್ಯರು ಯುವ ಮಹತ್ವಾಕಾಂಕ್ಷಿ ನಟಿಯರ ಜೀವನವನ್ನು ಹೇಗೆ ಹಾಳು ಮಾಡುತ್ತಾರೆ ಎಂಬುದನ್ನು ತೆರೆದಿಡುತ್ತದೆ ಎನ್ನಲಾಗಿದೆ. ಈ ಚಿತ್ರವನ್ನು ನಿರ್ಮಾಪಕ ರವಿ ದೇವನ್ ನಿರ್ಮಿಸುತ್ತಿದ್ದಾರೆ.
ಆದರೆ ಇತ್ತೀಚಿಗೆ ಈ ಚಿತ್ರದ ಕೆಲಸಗಳನ್ನು ನಿಲ್ಲಿಸುವಂತೆ ಅಪರಿಚಿತ ವ್ಯಕ್ತಿಗಳು ಫೋನ್ ಕರೆಗಳ ಮೂಲಕ ಬೆದರಿಕೆ ಹಾಕಿದ್ದಾರೆ ಮತ್ತು ಚಿತ್ರ ಬಿಡುಗಡೆ ಮಾಡಲು ತಡೆಯೊಡ್ಡುವುದಾಗಿ ಸವಾಲು ಹಾಕಿದ್ದಾರೆ ಎನ್ನಲಾಗಿದೆ. ಹೀಗಾಗಿ ನಿರ್ಮಾಪಕರು ಅವರ ವಿರುದ್ಧ ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.