ಬೆಂಗಳೂರು: ರಾಬರ್ಟ್ ಸಿನಿಮಾದ ಕಣ್ಣು ಹೊಡೆಯಾಕ ಹಾಡಿಗೆ 2 ಕೋಟಿ ವೀಕ್ಷಣೆ ಬಂದಿರುವುದು ಗಾಯಕಿ ಶ್ರೇಯಾ ಘೋಷಾಗೆ ಸಂತಸ ತಂದಿದೆ.
ಉತ್ತರ ಕರ್ನಾಟಕ ಶೈಲಿಯ ಭಾಷೆಯ ಕಣ್ಣು ಹೊಡೆಯಾಕ ಹಾಡಿನ ಸಾಲುಗಳನ್ನು ಕನ್ನಡ ಮೂಲದವರೇ ಹಾಡುವುದು ಕಷ್ಟ. ಆದರೆ ಶ್ರೇಯಾ ಇದನ್ನು ಆರಾಮವಾಗಿ ಹಾಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.
ಈ ಹಾಡಿಗೆ ಯೂ ಟ್ಯೂಬ್ ನಲ್ಲಿ 2 ಕೋಟಿ ವೀಕ್ಷಣೆ ಸಿಕ್ಕಿದೆ. ಇದಕ್ಕೆ ಸಂತೋಷ ವ್ಯಕ್ತಪಡಿಸಿರುವ ಶ್ರೇಯಾ ತಮ್ಮ ಟ್ವಿಟರ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಉತ್ತರ ಕರ್ನಾಟಕ ಶೈಲಿಯ ಪದಗಳನ್ನು ಹಾಡಿರುವೆ. ಇದಕ್ಕೆ 2 ಕೋಟಿ ವೀಕ್ಷಣೆ ಸಿಕ್ಕಿರುವುದು ಸಂತೋಷವುಂಟು ಮಾಡಿದೆ. ಇದಕ್ಕೆ ಕಾರಣರಾದ ಯೋಗರಾಜ್ ಭಟ್, ಅರ್ಜುನ್ ಜನ್ಯಾ, ನಟ ದರ್ಶನ್, ಆಶಾ ಭಟ್ ಗೆ ನನ್ನ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.