ಹೈದರಾಬಾದ್ : ಟಾಲಿವುಡ್ ಫ್ರಿನ್ಸ್ ಮಹೇಶ್ ಬಾಬು ಅಭಿನಯದ ಸರ್ಕಾರು ವಾರಿ ಪಾಟಾ ಚಿತ್ರದ ಚಿತ್ರೀಕರಣ ರದ್ದಾಗಿದೆಯಂತೆ.
ಹೌದು. ಸರ್ಕಾರು ವಾರಿ ಪಾಟಾ ಚಿತ್ರದಲ್ಲಿ ಮಹೇಶ್ ಬಾಬು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣವನ್ನು ಗೋವಾದಲ್ಲಿ ಚಿತ್ರೀಕರಿಸಲು ನಿರ್ಮಾಪಕರು ಯೋಜಿಸಿದ್ದರು.
ಆದರೆ ದೇಶಾದ್ಯಂತ ಕೊರೊನಾ ಹಾವಳಿ ಹೆಚ್ಚಾಗಿದ್ದು, ಕೊರೊನಾ 2 ನೇ ಅಲೆ ಈಗಾಗಲೇ ಪ್ರಾರಂಭವಾಗಿದೆ. ಹಾಗಾಗಿ ಗೋವಾ ಹಾಗೂ ದುಬೈ ಚಿತ್ರೀಕರಣವನ್ನು ರದ್ದುಮಾಡಲಾಗಿದೆ ಎನ್ನಲಾಗಿದೆ.