ಹೈದರಾಬಾದ್ : ಅರ್ಜುನ್ ರೆಡ್ಡಿ ಚಿತ್ರದ ಮೂಲಕ ಟಾಲಿವುಡ್ ನ ಗಮನ ಸೆಳೆದ ಸಂದೀಪ್ ರೆಡ್ಡಿ ವಂಗಾ ಬಾಲಿವುಡ್ ನಲ್ಲಿ ಬ್ಯುಸಿಯಾಗಲು ಪ್ರಯತ್ನಿಸುತ್ತಿದ್ದಾರೆ.
ಅವರು ತಮ್ಮ ಅರ್ಜುನ್ ರೆಡ್ಡಿ ಚಿತ್ರವನ್ನು ಹಿಂದಿಯಲ್ಲಿ ಕಬೀರ್ ಸಿಂಗ್ ಎಂದು ರಿಮೇಕ್ ಮಾಡಿದ್ದರು. ಆದರೆ ಅದು ಸೂಪರ್ ಹಿಟ್ ಆಗಿದ್ದರಿಂದ ಅವರಿಗೆ ಅಲ್ಲಿ ಒಳ್ಳೆಯ ಹೆಸರು ಸಿಕ್ಕಿದೆ. ಹಾಗಾಗಿ ಶೀಘ್ರದಲ್ಲಿಯೇ ಮತ್ತೊಂದು ಚಿತ್ರ ಘೋಷಣೆ ಮಾಡಲು ಮುಂದಾದರು. ಆದರೆ ಕಲೆವು ಕಾರಣಗಳಿಂದಾಗಿ ಅದನ್ನು ಮುಂದೂಡಲಾಯಿತು.
ಆದರೆ ಸಂದೀಪ್ ರೆಡ್ಡಿ ವಂಗಾ ತಮ್ಮ ನಿರ್ದೇಶನದ ಮುಂಬರುವ ಬಾಲಿವುಡ್ ಚಿತ್ರದ ಸಿದ್ದತೆ ನಡೆಸುತ್ತಿದ್ದು, ಈಗಾಗಲೇ ರಣಬೀರ್ ಕಪೂರ್ ಅವರೊಂದಿಗೆ ಚಿತ್ರದ ಬಗ್ಗೆ ಮಾತುಕತೆ ಮುಗಿಸಿದ್ದಾರೆ ಎನ್ನಲಾಗಿದೆ. ಶೀಘ್ರದಲ್ಲಿಯೇ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ ಎನ್ನಲಾಗಿದೆ.