Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಲೆಯಾಳಿ ನಟಿ ಭಾವನಾಗೆ ಲೈಂಗಿಕ ಕಿರುಕುಳಕ್ಕೆ ಸ್ಯಾಂಡಲ್‌ವುಡ್ ಗರಂ

ಮಲೆಯಾಳಿ ನಟಿ ಭಾವನಾಗೆ ಲೈಂಗಿಕ ಕಿರುಕುಳಕ್ಕೆ ಸ್ಯಾಂಡಲ್‌ವುಡ್ ಗರಂ
Chennai , ಸೋಮವಾರ, 20 ಫೆಬ್ರವರಿ 2017 (10:49 IST)
ಮಲೆಯಾಳಿ ನಟಿ ಭಾವನಾ ಅವರಿಗೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಸ್ಯಾಂಡಲ್‌ವುಡ್ ಬೆಚ್ಚಿಬಿದ್ದಿದ್ದು, ಈ ಬಗ್ಗೆ ಎಲ್ಲರೂ ಒಕ್ಕೊರಲಿನಿಂದ ಖಂಡಿಸಿದ್ದಾರೆ. ಭಾವನಾ ಅವರು ಜಾಕಿ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಅಡಿಯಿಟ್ಟರೂ ಆ ಬಳಿಕ ಸಾಕಷ್ಟು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ರೋಮಿಯೋ, ಟೋಪಿವಾಲಾ, ಮೈತ್ರಿ, ಮುಕುಂದ ಮುರಾರಿ ಹಾಗೂ ಚೌಕ ಚಿತ್ರಗಳಲ್ಲಿ ಅಭಿನಯಿಯಿಸಿದ್ದಾರೆ. ಈ ಬಗ್ಗೆ ಸ್ಯಾಂಡಲ್‌ವುಡ್‌ ಪ್ರತಿಕ್ರಿಯಿಸಿದ್ದು ಹೀಗೆ...
 
"ಈ ರೀತಿ ಯಾರಿಗೇ ಆಗಲಿ ಆಗಬಾರದು. ಸಿಕ್ಕ ಸಂದರ್ಭವನ್ನು ದುರುಪಯೋಗಪಡಿಸಿಕೊಳ್ಳುವುದು ಮನುಷತ್ವ ಅಲ್ಲ. ಮಹಿಳೆಯರ ಮಾನ ಮರ್ಯಾದೆ ಕಾಪಾಡುವವನೇ ನಿಜವಾದ ಗಂಡಸು. ಈ ರೀತಿ ನಡೆದುಕೊಂಡವರಿಗೆ ಕಠಿಣ ಶಿಕ್ಷೆಯಾಗಬೇಕು" - ಗೋಲ್ಡನ್ ಸ್ಟಾರ್ ಗಣೇಶ್.
 
"ಇದನ್ನು ಕೇಳಿದ ಕೂಡಲೆ ಶಾಕ್ ಆದೆ. ಸೆಲೆಬ್ರಿಟಿಗಳಿಗೇ ಹೀಗಾದರೆ ಇನ್ನು ಶ್ರೀಸಾಮಾನ್ಯನ ಪಾಡೇನು. ನನಗೆ ಗೊತ್ತಿರುವಂತೆ ಭಾವನಾ ಒಳ್ಳೆಯ ಹುಡುಗಿ. ಎಷ್ಟೋ ಹೀರೋಯಿನ್‌ಗಳ ಜತೆಗೆ ಕೆಲಸ ಮಾಡಿದ್ದೇನೆ. ಭಾವನಾ ಅಷ್ಟು ಮುಗ್ಧತನ ಯಾರಲ್ಲೂ ನೋಡಿಲ್ಲ. ಯಾರಿಗೂ ನೋವು ಮಾಡದಂತ ಹುಡುಗಿ"- ಶಶಾಂಕ್, ನಿರ್ದೇಶಕ.
 
"ಭಾವನಾ ಮತ್ತವರ ಕುಟುಂಬ ಬಗ್ಗೆ ನನಗೆ ಚೆನ್ನಾಗಿ ಗೊತ್ತು. ಘಟನೆ ಬಗ್ಗೆ ತಿಳಿದುಕೊಳ್ಳಲು ಅವರಿಗೆ ಕರೆ ಮಾಡಿದೆ. ಯಾವುದೇ ಲೈಂಗಿಕ ಕಿರುಕುಳ ಸಂಭವಿಸಿಲ್ಲ. ಆಕೆಯ ಬಳಿ ಹಣ ಕಿತ್ತುಕೊಳ್ಳಲು ಈ ರೀತಿ ಮಾಡಿದ್ದಾರೆ. ಭಾವನಾ ಜತೆಗೆ ಅವರ ತಾಯಿ ಮತ್ತು ಸಹೋದರ ಸಹ ಇದ್ದರು. ಘಟನೆಯಿಂದ ಆಕೆ ಶಾಕ್‌ಗೆ ಒಳಗಾಗಿದ್ದಾರೆ. ಇದರಿಂದ ಹೊರಬರಲು ಸ್ವಲ್ಪ ಸಮಯ ಬೇಕಾಗಬಹುದು"- ಯೋಗೀಶ್ ದ್ವಾರಕೀಶ್. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್‌ನಲ್ಲಿ ಎಮಿ ಜಾಕ್ಸನ್‌ಗೆ ಭರ್ಜರಿ ಚಾನ್ಸ್