ಬೆಂಗಳೂರು: ರಾಜ್ಯ ಸರ್ಕಾರ ಕೊರೋನಾ ನಿಯಮಗಳನ್ನು ಬಹುತೇಕ ಸಡಿಲಗೊಳಿಸಿದೆ. ಆದರೆ ಚಿತ್ರಮಂದಿರಕ್ಕೆ ಮಾತ್ರ 50-50 ರೂಲ್ಸ್ ನಿಯಮ ಮುಂದುವರಿಸಿದೆ. ಇದು ಫಿಲಂ ಚೇಂಬರ್ ಅಸಮಾಧಾನಕ್ಕೆ ಕಾರಣವಾಗಿದೆ.
ರಾಜ್ಯ ಸರ್ಕಾರ ಎಲ್ಲವನ್ನೂ ತೆರೆಯಲು ಅನುಮತಿ ನೀಡಿದೆ. ಆದರೆ ಚಿತ್ರಮಂದಿರಕ್ಕೆ ಮಾತ್ರ 50-50 ರೂಲ್ಸ್ ಮಾಡಿದೆ. ಇದು ಮಲತಾಯಿ ಧೋರಣೆ. ನಮಗೂ ಶೇ.100 ಆಸನ ವ್ಯವಸ್ಥೆಗೆ ಅವಕಾಶ ನೀಡಲಿ ಎಂದು ವಾಣಿಜ್ಯ ಮಂಡಳಿ ಆಗ್ರಹಿಸಿದೆ.
ಈಗಾಗಲೇ 50-50 ರೂಲ್ಸ್ ನಿಂದಾಗಿ ಹಲವು ಸ್ಟಾರ್ ಸಿನಿಮಾಗಳು ರಿಲೀಸ್ ಮುಂದೂಡಿದೆ. ಸ್ಟಾರ್ ಸಿನಿಮಾಗಳು ಬಿಡುಗಡೆಯಾಗದೇ ಚಿತ್ರರಂಗಕ್ಕೆ ಆರ್ಥಿಕವಾಗಿ ಮುನ್ನಡೆಯದು ಎಂಬುದು ಸಿನಿ ಮಂದಿಯ ವಾದ.